|| ದೇವಿ ಸ್ತುತಿ ||
ರಾಗ : ಆನಂದಭೈರವಿ
ತಾಳ:ಅದಿ
॥ ರಾಜೇಶ್ವರಿಯೆ ಪಾಲಿಸು |
ರಾಜಶೇಖರಿ ಪಾಲಿಸು ||
ರಾಜಮುಖಿ ಮೂಲೋಕ ಪೂಜಿತೆ ।
ರಾಜ ತೇಜವಿರಾಜಿತೆ ॥
॥ ಗಿರಿಜೆ ಲಕ್ಷ್ಮಿಯು | ವಾಣಿಯೆನಿಸುತ ।
ಚರಣ ಭಕ್ತರ ಪೊರೆಯುತ ||
ಪರಮ ಭೋಗವು ಮೋಕ್ಷ ಪಥವಂ |
ಸುರತರುವಿಂತೀಯುವ ॥ ೧
|| ನಾದ ಬಿಂದು ಕಳಾ ಸ್ವರೂಪಿಣಿ ।
ಮೋದ ಸಚ್ಛಿದ್ರೂಪಿಣಿ ॥
ವೇದ ಗಾಯತ್ರಿ ಸ್ವರೂಪಿಣಿ |
ಆದಿ ಬ್ರಹ್ಮ ಪರಾಯಿಣಿ || ೨
॥ಬುಗುರಿಯಂತಾಡಿಸುವೆ ನೀನು |
ನಗುತ ಮುಮ್ಮೂರ್ತಿಗಳನು |
ನಿಗಮವಂದಿತೆ ರಂಗ ಗುರುವಿನ ।
ಅಗಲದಿರುತಿರೇ ಅನುದಿನ ॥ ರಾಜ ರಾಜೇಶ್ವರಿಯೆ || ೩
0 ಕಾಮೆಂಟ್‌ಗಳು