ಶಿವ ಶಂಭೋ ಜಾಗದನಂದ ಕರಾ - Shiva shambho jagadananda kara

 ॥ ಶಿವಸ್ತುತಿ ॥ 


ರಾಗ : ಕಾಮವರ್ಧಿನಿ

ತಾಳ : ಆದಿ 

Kannada bhajan lyrics
Belaguru bhajan lyrics, belaguru swamiji


||ಶಂಭೋ ಜಗದಾನಂದ ಕರಾ । ಶಿವ ॥

ಶಂಭೋ ಜಗದಾನಂದ ಕರಾ ||

ತುಂಬುರು ನಾರದ ಗಾನಾನಂದಾ ॥

ಶಿವಶಂಭೋ ಜಗದಾನಂದ ಕರಾ ||ಪಲ್ಲವಿ||


॥ ನಿಗಮಾತೀತ । ನಾಗ ವಿಭೂಷಣಾ ॥

ಸುಗುಣ ನಿರಾಮಯಾ ಮೃಗಧರ ದೇವಾ॥

ಶಿವಶಂಭೋ ಜಗದಾನಂದ ಕರ ॥ ಶಿವ ॥   ೧.


॥ ಲಿಂಗರೂಪ ಗುರು ಭಾಂಗನೆ ದೇವಾ ॥

ಜಗಂಗಳ ಪಾಲಿಪ । ರಾಮೇಶ್ವರ ಶಿವ ||

ಶಂಭೋ ।ಜಗದಾನಂದಕರ ॥ ಶಿವ ॥   ೨.


॥ ಸದ್ಗುರುವೇ ಪರಬ್ರಹ್ಮ ಸ್ವರೂಪ ।

ಸದ್ಗುರುವೇ ಪರಬ್ರಹ್ಮ ಸ್ವರೂಪ ॥

ಗುರುವೆ ಚರಾಚರ । ಚಿನ್ಶಯರೂಪ ॥

ಸದ್ಗುರುವೇ ಪರಬ್ರಹ್ಮ ಸ್ವರೂಪ ॥     ೩.


॥ ಗುರುವೇ ಆದಿ । ಗುರುವೇ ಅನಾದಿ ॥

ಆದಿ ಅಂತ್ಯ ರಹಿತತ್ವ ಸ್ವರೂಪ ॥

ಸದ್ಗುರುವೇ ಪರಬ್ರಹ್ಮ ಸ್ವರೂಪ ॥

ಸದ್ಗು ರುವೇ ಪರಬ್ರಹ್ಮ ಸ್ವರೂಪ ॥    ೪.


ಸಕಲ ಶಾಸ್ತ್ರ ಕೃತಿ ವೇದ ಪುರಾಣ ॥

ನಿಕಿಲಲೋಕದಾ । ಪರಿಪೂರ್ಣನು ನೀನೇ ॥

ಗುರುವೇ ಪರಬ್ರಹ್ಮ ಸ್ವರೂಪ ।

ಸದ್ಗುರುವೇ ಪರಬ್ರಹ್ಮ ಸ್ವರೂಪ ॥     ೫.


॥ ಮಂಗಳದಾಯಕ | ಮಹಿಮಾಮೂರುತಿ ।

ಮಂಗಳರೂಪನೆ ಜಯ ಜಯ ಮಂಗಳ ॥

ಗುರುವೇ ಪರಬ್ರಹ್ಮ ಸ್ವರೂಪ ।

ಸದ್ಗುರವೇ ಪರಬ್ರಹ್ಮ ಸ್ವರೂಪ ॥      ೬.


॥ಓಂಕಾರವನೇ । ಝೇಂಕರಿಸಿಸುತ ಬಾ ।

ಕಿಂಕರನು ಪೊರೆ ಓಂನಾದ ಸ್ವರೂಪ ॥

ಸದ್ಗುರುವೇ ಪರಬ್ರಹ್ಮ ಸ್ವರೂಪ ।

ಸದ್ಗುರುವೇ ಪರಬ್ರಹ್ಮ ಸ್ವರೂಪ ॥    ೭.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು