ಶ್ರೀರಾಮ ಜಯರಾಮ ರಘುವಂಶ ಸೋಮ - Sri Rama Jaya Rama Raghuvamsha Soma

 || ರಾಮ ಸ್ತುತಿ ||

kannadabhajanlyrics.com
kannadabhajanlyrics.com

ಶ್ರೀರಾಮ ಜಯರಾಮ ರಘುವಂಶ ಸೋಮ

 ಶ್ರೀರಾಮ ಗುಣಧಾಮ ಸೀತಾಪತಿ ರಾಮ || ಪ ||


 ಶ್ರೀ ರಾಮನ ಗುಣ ನಾಮವ ಅನುದಿನವು

 ಜಪಿಸಿ ಜಲ ಫಲಗಳ ನೈವೇದ್ಯವ ನಾ

 ತೀತಕೆ ಇಳಿಸಿ ಮೈಯೆಲ್ಲವ ಕಣ್ಣಾಗಿಸಿ

 ಅಂಗಾಂಗವ ಕಿವಿಯಾಗಿಸಿ ಕಾದಿರುವಳು ಶಬರಿ||೧||


ಬಡ ಗುಡಿಸಲು ಮುರುಕಾಗಿದೆ ನೆಲೆ ಬಲೆಗಳು

 ಬಿರುಕಾಗಿದೆ ತಲೆಕೂದಲು ಹಣ್ಣಾಗಿದೆ 

 ಹಳೆ ಬಟ್ಟೆಯು ಮಣ್ಣಾಗಿದೆ ಕಣ್ ಕಾಣದ

ಕಿವಿ ಕೇಳದ ಬೆನ್ ಬಾಗಿದೆ ಮುದುಕಿ

 ಶ್ರೀರಾಮನ ದರುಶನಕೆ ಕಾದಿಹಳು ಬದುಕಿ  || ೨ ||


 ಮನದೊಳಗಿನ ಕಣ್ಣು ತುಂಬುವ ರಾಮನ

 ಪ್ರತಿಬಿಂಬ ನರನರದಲಿ ಪ್ರತಿಧ್ವನಿಸುತಿದೆ

 ರಾಮನ ಶುಭ ನಾಮ ಎದೆ ಗಡಲಲಿ

 ದೃಢ ಭಕುತಿಯು  ಸೆರೆಯುಕ್ಕಿದೆ ಸೊಕ್ಕಿ

 ಶ್ರೀರಾಮನ ನಾಮಾಮೃತ ನೊರೆ ಹೊಮ್ಮಿದೆ ಚಿಮ್ಮಿ || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು