|| ರಾಮಲಾಲಿ ||
Kannadabhajanlyrics.com |
ರಾಮ ಲಾಲಿ ಮೇಘ | ಶ್ಯಾಮ ಲಾಲಿ
ತಾಮರಸ ದೊಳು ನಯನ|ತನಯ ಲಾಲಿ ||ಸೀತಾ||
ಪುತ್ರವಾದಿನುತ ಶತ | ಪತ್ರ ನೇತ್ರ ರಾಮ |
ಮಿತ್ರ ವಂಶ ಜಾನುತ | ವಿಶ್ವಾಮಿತ್ರ ॥ ಸೀತಾ॥
ಘೋರತಾಟಕಾಂತಕ | ತಾರಕುಟದೀ ರಾಮ |
ಭೂರೀ ರಾಕ್ಷಸ ಸಂಹಾರ | ಮೇರು ಧೀರ || ಸೀತಾ॥
ಮಂದಾರೋ ವೃಂದಾವಂದೀತ | ಇಂದಿರೇಶ ರಾಮ
ಇಂದುಧರ ಸುಖಭವ | ಬೃಂದ ನಾಶ ॥ ಸೀತಾ॥
ಮನುವಂಶಾ ಪಾಲಕ ಭಾನು ತನುಜ | ಪೋಷಕ ರಾಮ ವನಚರ ರಕ್ಷಾ ಸೀತಾ | ವನಿತಾ ನಾಯಕ ॥ ಸೀತಾ॥
ಸಾಕೇತ ಪುರಾಧಿನಾಥ | ಲೋಕ ವಿಖ್ಯಾತ ರಾಮ |
ಭೂಕನ್ಯಾ ಸಮೇತ | ವಾಲ್ಮೀಕಿ ವಿನುತ ॥ ಸೀತಾ॥
ದಾಸ ಸಜ್ಜನರ ಪೋಷಿಸುವ|ವಾಸುದೇವನೆ ರಾಮ |
ಶೇಷಾಚಲ ನಿ | ವಾಸ ಕಾಯೋ | ಶ್ರೀನಿವಾಸನೆ || ಸೀತಾ
ಅರಿಯರು ನೀನಲ್ಲದೆ ಮ | ತ್ತನ್ಯ ದೈವ ರಾಮ |
ಮರೆಯೋದೇನು ಮಾಡಿದಂಥ | ನಿತ್ಯ ಉಪಕಾರ || ಸೀತಾ
ರಂಗನಿನ್ನ ಕೊಂಡಾಡುವ | ಮಂಗಳಾತ್ಮಕ ರಾಮ
ಸಂಗಸುಖ ವಿತ್ತುಕಾಯೋ | ಕರುಣಾಸಾಗರ ॥ ಸೀತಾ॥
ಕನಕದ ತೊಟ್ಟಲೊಳಗೆ | ಇನಕುಲೇಶ ರಾಮ ।
ವಿನಯದಿಂದ ಪವಡಿಸಯ್ಯ | ರಾಮಚಂದಿರ ॥ ಸೀತಾ॥
ಹಗಲು ನಿನ್ನ ನೆನೆಯಲಿಲ್ಲ | ಹಸಿವು ತೃಷೆಯಿಂದ ರಾಮ |
ಇರುಳೂ ನಿನ್ನ ನೆನೆಯಲಿಲ್ಲ | ನಿದ್ರೆ ಭರದಿಂದಾ || ಸೀತಾ
ಇವೆರಡರ ಪಾಲಿಗೆ ಒಳಗಾದೆ | ಪುರಂದರ ವಿಠಲ |
ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ | ವಿಠ್ಠಲ ವಿಠ್ಠಲ ||
ಲಾಲೀ ಲಾಲೀ ಮಾಯಾ | ಲೋಲ ಲಾಲೀ |
ಕಾಲ ಕರ್ಮವೆಲ್ಲ ನಿನ್ನ | ಲೀಲೆ ಲಾಲಿ || ಸೀತಾ
ರಾಮ ಜೋ ಜೋ | ಪೂರ್ಣ ಕಾಮ ಜೋ ಜೋ |
ಸೋಮ ಶೇಖರಾನುತೇ | ರಾಮ ಜೋ ಜೋ || ಸೀತಾ
0 ಕಾಮೆಂಟ್‌ಗಳು