|| ಗೌರೀ ಆರುತಿಯ ಹಾಡು ||
ಆರುತಿಬೆಳಗಿರೆ ಮಾರಮಣಗೆ ವರನಾರಿಯರು ಎಂಬಂತೆ
ಅರುತಿ ಬೆಳಗಿರೆ ನಾರಿಯರು ಬೇಗ |
ಅದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ |
ಹಾಡುತ ಜಾಣೆಯರೆಲ್ಲರು |
ಆದಿ ನಾರಾಯಣ ಪ್ರೀಯಳಿಗೆ || ಪ ||
ಪಿಲ್ಲೆ ಕಾಲುಂಗುರ ಉಲ್ಲು ಪೈಜನರುಳಿ |
ಘಲ್ಲು ಘಲ್ಲೆಂದು ಹೆಜ್ಜೆಯನಿಡುತ ||
ಉಲ್ಲಾಸದಿಂದಲಿ ನಡುವಿಗೊಡ್ಯಾಣ |
ಫುಲ್ಲ ನಾಭನ ಪ್ರೀಯಳಿಗೆ ||೧||
ಜರದ ಪಿತಾಂಬರ ನಿರಿಗೆಗಳಲೆಯತ |
ಝಗ ಝಗಿಯಿಂದ ಹೊಳೆಯುತಲಿ ||
ತೊಟ್ಟ ಕಂಚುಕವನು ಇಟ್ಟ ವಂಕಿಯ ತೋಡೆ |
ಬೆಟ್ಟದ ವೆಂಕೋಬನ ಮಡದಿಗೆ ||೨||
ಚೌರಿರಾಗುಟಿ ಗೊಂಡೆ ಹೆರಳು ಬಂಗಾರ|
ಬುಗುಡಿ ವಾಲಿಗಳು ಹೊಳೆಯುತಲಿ |
ಸಡಗರದಿಂದ ಕುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ ||೩||
0 ಕಾಮೆಂಟ್‌ಗಳು