|| ಸರಸ್ವತಿ ಸ್ತುತಿ ||
ಶ್ರೀ ವಾಣಿ ಕಲ್ಯಾಣ ಗುಣಮಣಿ
ಲೋಕ ಜನನಿಗೆ ಸಮಿಸುವೆವು |
ಕೋಕಿಲ ವಾಣಿ ಫಣಿ ಸಮ ವೇಣಿ
ವೀಣಾ ಪುಸ್ತಕ ಪಾಣಿಯೆ॥ ಪ ||
ವಿದ್ಯಾಧೀಶ್ವರಿ ವಿಧಿಪ್ರಾಣೇಶ್ವರಿ
ವಿದ್ಯಭಯಾಹರಿ ಶಂಕರಿ
ವಿದ್ಯಾ ಬುದ್ಧಿಗಳನು ನೀ ಕರುಣಿಸು
ಮುದ್ದು ಕುಮಾರರ ರಕ್ಷಿಸು ॥1||
ಮಯೂರ ವಾಹನ ಮರಾಳ ಗಮನ
ಸುರ ನರ ಕಿನ್ನರ ಮುಖ ಚರಣೇ
ತೋಯಜ ನಯನೆ ಸುರನರ ವದನೆ
ಭಾರತಿ ಶಂಕರಿ ಸ್ತುತಿ ಸದನೆ||2॥
0 ಕಾಮೆಂಟ್‌ಗಳು