|| ಲಕ್ಷ್ಮಿ ಹಾಡು ||
ಕಣ್ಣುಗಳೆರಡು ಸಾಲದಮ್ಮ ಲಕ್ಷಿ ನಿನ್ನ ನೋಡಲು
ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ ಪಾಡಲು
ಯಾವ ಭಾವದಿ ಯಾವ ರಾಗದಿ ಪಾಡಿ
ಹಾಡಲಿ ನಿನ್ನಯ ತಾಯಿ॥ ಪ ||
ಶರಣಾಗತ ವರದೇ ವರ ದೇವಿ ಕರುಣ ಸದಯೇ
ಸುರವರ ಪೂಜಿತೆಯೇ ಕರವೀರ ಪುರಾನಿಲಯೇ
ದುರಿತ ನಿವಾರಿಣಿ ಭವ ಭಯ ಹಾರಿಣಿ
ಮಂಗಳದಾಯಿನಿ ನಾರಾ...ಯಣಿ ||1||
ಪನ್ನಗ ಫಣಿ ವೇಣಿ ಪದ್ಮಾಸಿನಿ ಹರಿ ರಾಣಿ
ಪದ್ಮ ಗದಾ ಪಾಣಿ ಪರಮ ಗುಣಾ ಸುಗುಣಿ
ಇಂದಿರ ನಯನೇ ಚಂದಿರ ವದನೇ
ಅನುಪಮ ಸುಂದರಿ ನಾರಾ...ಯಣಿ।|2||
ಧನ ಕನಕವ ಕೊಡುವ ಧನ ಲಕ್ಷ್ಮಿಯು ನೀನಾಗಿ
ಧರೆಯಲಿ ಸೆಲೆಸಿರುವೆ ದೀನರ ರಕ್ಷಿಸಲು
ಸಂಕಟ ಹರಿಸುವ ವೆಂಕಟ ರಮಣಿ
ಆರ್ದ ಪರಾಯಣಿ ನಾರಾ...ಯಣಿ।|3||
0 ಕಾಮೆಂಟ್‌ಗಳು