ಆಡುತ ಬಾರಮ್ಮ ನಲಿದಾಡುತ ಬಾರಮ್ಮ -Aduta Baramma

 || ಲಕ್ಷ್ಮಿ ಹಾಡು ||

kannadabhajanlyrics.com
kannadabhajanlyrics.com

ಆಡುತಬಾರಮ್ಮ ನಲಿನಲಿದಾಡುತ ಬಾರಮ್ಮ ॥ ಪ ॥

ಆಡುತ ವರಗಳ ನೀಡುತ ದಯದಿಂದ

ಪಾಡುತ ಲಕ್ಷ್ಮೀ ನಡು ಮನೆಗಿಂದು  ||ಅ.ಪ||


ಹೆಜ್ಜೆಯ ನೀಡುತಲಿ ವಜ್ರದ ಪೈಜನ ಕಾಲ್ಗಳಲಿ॥೧||

ಸಜ್ಜನರ ಕೈ ಸೇವೆಯಗೊಳ್ಳುವ

ಗೆಜ್ಜೆ ಕಾಲ್‌ ಧ್ವನಿ ಘಲ್‌ ಘಲ್ ಎಂದು

ಕಂಕಣ್‌ ಕೈಗಳಲ್ಲೀ ಹೊಳೆಯುವ ವಂಕಿಯ ತೋಳ್ಗಳಲ್ಲೀ


ಪಂಕಜ ಮುಖಿಯರು ಶಂಕೆ ಸಂಭ್ರಮದಿಂದ ||೨ ||

ಕಂಕಣ ರವ ಕಿಣಿಕಿಣಿಕಿಣಿ ಕಿಣಿಎಂದು 

ಥಳ ಥಳ ಹೊಳೆಯುತಲಿ ತರುಣಿಯರ ಕೋಟಿ ಪ್ರಕಾಶದಲಿ


ತರಿಕಿಟ ಆ ಧಿಮಿ ಧಿಮಿತ ಧಿಮಿತ ಎಂದು || ೩ ||

ತಾಳಗತ್ತಿನಿಂದ ಥೈಥೈಥೈ ಎಂದು 

ಜಗವನುದ್ಧರಿಸುತಲಿ ಜಗದೊಳು ಜಗಮತಿ ನೀಡುತಲಿ 


ಜನರು ನೋಡಿ ಜಯ ಕೊಡುತಲಿ ಉಲ್ಲಾಸ ||೪||

ಜಗದಂಬೆ ತಾಯೆ ಝಣಕು ಝಣಕು ಎಂದು

ಸನ್ನುತಿ ಪುರವಾಸಿ ನೆಲೆಸಿರು ಭೀಮಾತೀರದಲಿ

ಭಕುತರ ಕರದಿಂ ಸೇವೆಯಗೊಳ್ಳುತ

ಹರಿ ವಿಠಶಲೇಶನ ಮೋಹದ ರಾಣಿ





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು