ಸಕಲ ದುರಿತಗಳ ಪರಿಹಾರ ಮಾಡಿದ್ಯೋ ವೆಂಕಟೇಶ

 


 ಸಕಲ ದುರಿತಗಳ ಪರಿಹಾರ ಮಾಡಿದ್ಯೋ                                       ವೆಂಕಟೇಶ 

kannadabhajanlyrics.com
kannadabhajanlyrics.com


ಸಕಲ ದುರಿತಗಳ ಹರಿಹಾರ

ಮಾಡಿದ್ಯೋ ವೆಂಕಟೇಶ 

ಭಕುತಿಗೊಲಿದು ಬಂದ

ಭಕ್ತರ ಕಾಯ್ದ್ಯೋ ವೆಂಕಟೇಶ||ಅ.ಪ ||


ಮತ್ಸ್ಯಾವತಾರದಿ ನಾಲ್ಕು ವೇದವ

ತಂದ್ಯೋ ವೆಂಕಟೇಶ

ಪೃಥ್ವೀ ಧರನ ಪೊತ್ತು

ಬೃತ್ಯರ ಕಾಯ್ದ್ಯೋ ವೆಂಕಟೇಶ ||೧||


ಧರೆಯ ನೋಯ್ದನ ಕೋರೆ ದಾಡಿಯಿಂದ

ಕೊಂದ್ಯೋ ವೆಂಕಟೇಶ

ತರಳಗೊಲಿದು ನೀ ಕಂಬದಿಂದಲಿ

ಬಂದ್ಯೋ ವೆಂಕಟೇಶ || ೨ ||


ಭೂಮಿದಾನ ನೀಡಿದವನ

ಬಾಗಿಲ ಕಾಯ್ದ್ಯೋ ವೆಂಕಟೇಶ

ಭೂಮಿಪಾಲರನಳೆದು ಬಾರ್ಗವ

ನೆನಿಸಿದ್ಯೋ ವೆಂಕಟೇಶ || ೩||


ದಶ ಶಿರನನು ಕುಟ್ಟಿ ಶಶಿಮುಖಿಯಳ

ನೀ ತಂದ್ಯೋ ವೆಂಕಟೇಶ

ಅಸುರೆಯ ಸಂಹರಿಸಿ ಕಂಸನ

ಮಡುಹಿದ್ಯೋ ವೆಂಕಟೇಶ || ೪ ||


ಅಧಮ ಜನರಿಗೆ ಭೋಧಿಸಿ

ಬೆತ್ತಲೆ ನಿಂತ್ಯೋ ವೆಂಕಟೇಶ

ಕುದುರೆಯನೇರಿ ಕಲ್ಕಿ ರೂಪವ

ತಾಳ್ದ್ಯೋ ವೆಂಕಟೇಶ || ೫ ||


ಹರಿದಾಸರ ಮೇಲೆ ಒಲಿದು

ಬೇಗದಿ ಬಂದ್ಯೋ ವೆಂಕಟೇಶ

ವರದ ಪುರಂದರ ವಿಠಲ ನಮೋ

ನಮೋ ನಮೋ ನಮೋ ವೆಂಕಟೇಶ || ೬ ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು