ಶ್ರೀ ರುಕ್ಮಿಣಿ ಶೋಭಾನೆ ಶೋಭಾನವೆನ್ನಿರೆ ಶೋಭಾನವೆನ್ನಿರೆ |

|| ಶ್ರೀ ರುಕ್ಮಿಣಿ ಶೋಭಾನೆ ||

 ರಚನೆ : ಶ್ರೀ ಪ್ರಸನ್ನ ವೆಂಕಟದಾಸರು 

kannadabhajan lyrics.com
kannadabhajan lyrics.com 

ಶೋಭಾನವೆನ್ನಿರೆ ಶೋಭಾನವೆನ್ನಿರೆ |

ಶೋಭಾನವೆನ್ನೀ ಶುಭವೆನ್ನೀ|

ಶೋಭಾನವೆನ್ನೀ ಶುಭವೆನ್ನೀ ಕೃಷ್ಣಗೆ |

ರುಕ್ಮಿಣಿ ಅರಸಗೆ ಶೋಭಾನೆ ॥ಪ॥


ಬ್ರಹ್ಮ ರುದ್ರಾದ್ಯರಿಗೆ ಕಡೆಗಣ್ಣಿನ ನೋಟಾದಿ |

 ಉಮ್ಮಯದಾ ಪದಾವೀವ ಮಹಾಲಕ್ಷ್ಮೀ 

ಉಮ್ಮಯದಾ ಪದಾವೀವ ಮಹಾಲಕ್ಷ್ಮೀ ಭಿಷ್ಮಕನಾ 

ಹೆಮ್ಮಗಳಾಗೀ ಅವತರಿಸೆ      || ೧ ||


ಪುತ್ರಿಗೆ ವರನಾಗಬೇಕೆಂದು ಮನದಲಿ | 

ಪತ್ರೀಂದ್ರ ವಾಹನಾಗೀವೆನೆಂದು |...

ಪತ್ರೀಂದ್ರ ವಾಹನಾಗೀವೆನೆಂದು ದಿವಾರಾತ್ರಿ

ಶ್ರೀ ಕೃಷ್ಣನಂಘ್ರಿ ನೆನೆದನು || ೨ ||


ಮುನ್ನೆ ವರುಣನು ತನ್ನ ಕನ್ನಿಕೆಗೆ ಅಜಿತಾಗೆ

ಮನ್ನಿಸಿ ಕೊಟ್ಟಾ ಪರೀಯಂತೇ।

ಆ ಮನ್ನಿಸಿ ಕೊಟ್ಟಾ ಪರೀಯಂತೇ ನಾನೀಗ 

ಧನ್ಯನಾಗುವೆನೆಂಬಾ ಸುಖಾವಿಡಿಯೆ ॥3॥


ಬ್ಯಾರೆ ದುರ್ಬುದ್ದಿಯನು ನ್ಯನದು |

ರಾಯನಮಗನು|ಕ್ರೂರ ಮಾಗಧ ಪೌಂಡ್ರಕರ ವಡಗೂಡಿ ॥

ಕ್ರೂರ ಮಾಗಧ ಪೌಂಡ್ರಕರ ವಡಗೂಡಿ ಚೈದ್ಯನಿಗೆ |

ನಾರೀ ರುಕ್ಮಿಣಿಯ ನಿಶ್ಚೈ ಸೀದ ॥ ೪ ॥ 



ರಾಹಸ್ಯದಲಿ ದೇವಿ ಓಲಿಯ ಬರದಿತ್ತು |

ಮಹಿಸುರೋತ್ತಮನ ಕಳುಹಿರಲು॥

ಮಹಿಸುರೋತ್ತಮನ ಕಳುಹಿರಲು ಅದನೋಡಿ 

ಶ್ರೀಹರಿಯಾಕ್ಷಣದಿ ಹೊರಹೊಂಟಾ|| ೫ ||


ವೈದರ್ಭ ನಗರಕೆ ಹೊರಹೊಂಟು ಯಾದವರರಸ।

ಬಾ ನಡೆತಂದತಿ ಶೀಘ್ರದಲಿ ಭರದಿಂದ

ಬಾ ನಡೆತಂದತಿ ಶೀಘ್ರದಲಿ ಭರದಿಂದ

ಯಾದವರಖಿಳರು ಬಲರಾಮರೊಡನೆ   || ೬ ||


ಕುಂಡಿನ ಪುರ ಕೈತಂದು ಕಂಡನು ಪುರವನು

ಹರಿಯು | ಹಿಂಡುದಿತಿಜರು ನೆರೆದು ಸಂದಣಿಸಿ ॥ 

ಹಿಂಡುದಿತಿಜರು ನೆರೆದು ಸಂದಣಿಸಿ ಕತ್ತಲಿಗೆ 

ಮಾರ್ತಾಂಡ ಕೃಷ್ಣಯ್ಯಾ ಉದೀಸೀದಾ || ೭ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು