|| ಬ್ರಹ್ಮಚೈತನ್ಯ ಸ್ತುತಿ ||
kannadabhajanlyrics.com |
ಚೈತನ್ಯ ನಾ ನಿನ್ನ ನಂಬಿದೆ
ಭಕ್ತ ಜಗಮಾನ್ಯನೆ ನಿನ್ನ ನಂಬಿದೆ || ಪ ||
ಗೊಂದವಳೀ ಪುರ ವಾಸನೆ
ತಂದೆ ಶ್ರೀರಾಮಚಂದ್ರನ ದಾಸನೇ
ಶ್ರೀಗಂಧ ತುಳಸಿಯ ಧಾರಿಯೇ
ಅಂಧಕಾರಕ್ಕೆ ಜ್ಯೋತಿ ಸ್ವರೂಪನೇ || ೧ ||
ಕಾಮಾದಿ ಅರಿಗಳ ದಾಸನೇ
ಪ್ರೇಮ ಕರುಣಾ0ತರಂಗನೇ ಈಶನೇ
ಶ್ರೀ ರಾಮ ನಾಮದ ಬೋಧನೆ
ಎಲ್ಲೆಲ್ಲೂ ಮಾಡಿದ ನಾಥನೇ || ೨ ||
ತೇರಾ ಕೋಟಿ ಜಪ ಸಾಧಕ
ಧೀರ ಗಂಭೀರ ಭಕ್ತ ಪಾಲಕ
ವರ ಕ್ಷೀರಾಬ್ಧಿ ಶಯನನ ಸೇವಕ
ಪಾರು ಮಾಡಯ್ಯ ಈ ಭವ ಕಂಟಕ || ೩ ||
ಬ್ರಹ್ಮಾನಂದಾರ್ಚಿತ ದೇವನೇ
ಬ್ರಹ್ಮಚೈತನ್ಯ ಠಾವೋಜಿ ಪುತ್ರನೇ
ನಮ್ಮ ತಾಳ್ಯದ ಹನುಮನ ರೂಪನೆ
ಪ್ರೇಮ ಜ್ಯೋತಿ ಪ್ರದೀಪನೇ ವಂದನೆ || ೪ ||
0 ಕಾಮೆಂಟ್‌ಗಳು