ಹರಿಯ ಪಟ್ಟದ ರಾಣಿ ವರದೆ ಕಲ್ಯಾಣೀ - Hariya Pattada Rani Varade Kalyani

|| ಲಕ್ಷ್ಮಿ ಹಾಡು ||


ಹರಿಯ ಪಟ್ಟದ ರಾಣಿ ವರದೆ ಕಲ್ಯಾಣೀ

ಉರುಗುಣ ಗಣಶ್ರೇಣಿ ಕರುಣಿ 

ಶಿರದಿ ನಿನ್ನಯ ದಿವ್ಯ ಚರಣಕಮಲಕೆ

ನಾನು ಎರಗಿ ಬಿನ್ನೈಪೆ ತಾಯೆ ಸುಖವೀಯೆ ॥ ಪ ॥ 


ವನಜಸಂಭವ ಮುಖ್ಯ ಅನಿಮಿಶೇಷರ ಸ್ತೋಮ

ದಿನದಿನ ನೀ ಪೊರೆವೇ ಘನಮಹಿಮಳೆ

ಮನುಜರಾಧಮನೆಂದು ಮನಸಿಗೇ ನೀ ತಂದು

ಕನಕ ವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ|| ೧॥ 


ಸೃಷ್ಟಿಕಾರಿಣಿ ನೀನೆ ಕಷ್ಟ ತರಿದು ಕೃಪಾ--

ದೃಷ್ಟಿ ಯಿಂದಲಿ ನೋಡಿ ಸಲಹೆ ಮಾತೆ

ಇಷ್ಟದಾಯಕ ಸಿರಿ ಕೃಷ್ಣನರಸಿಯೆ

ಇಷ್ಟು ವಿಧದಿ ಬೇಡಿಕೊಂಬೆ ನಿನ್ನ ಅಂಬೆ ॥ ೨॥ 


ಖ್ಯಾತಮಹಿಮಳೆ ಎನ್ನ ಮಾತು ಲಾಲಿಸು ದೇವಿ

ಪೋತ ನಾನಲ್ಲೆ ನಿನಗೆ

ದಾತ ಗುರು ಜಗನ್ನಾಥವಿಠ್ಠಲ ನಿನ್ನ 

ನಾಥನಾಗಿ ಭಾಗ್ಯ ಪಡೆದ ಜಸ ಪಡೆದಾ ॥ ೩ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು