ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ - Sri Bhoomi Durge Mattebhendra Gamane

 || ಶ್ರೀ ಭೂದರ್ಗಾ ಸ್ತುತಿ ||



ಶ್ರೀಭೂಮಿದುರ್ಗೆ ಮತ್ತೇಭೇಂದ್ರ ಗಮನೆ ಸ್ವ

ರ್ಣಾಭಗಾತ್ರೇ ಸುಚರಿತ್ರೆ । ಸುಚರಿತ್ರೆ ಶ್ರೀಪದ್ಮ--

ನಾಭನ್ನ ಜಾಯೆ ವರವೀಯೆ ||೧|| 


ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳ

ಬಗೆಯದಲೆ ಕಾಯೆ ವರವೀಯೆ|ವರವೀಯೆ ನಿನ್ನಪದ

ಪದಯುಗಳಕ್ಕೆ ನಮಿಪೆ ಜಗದಂಬೆ ॥ ೨॥ 


ದರಹಸಿತವದನಸುಂದರಿ ಕಮಲಸದನೆ ನಿ--

ರ್ಜರಸಿದ್ಧಗೀತೇ ವಿಧಿಮಾತೇ|ಮತ್ತೇಭೇಂದ್ರಗಮನೆ song lyrics in Kannada, Sri Bhoomi Durge Mattebhendra Gamane song lyrics in Kannada ವಿಧಿಮಾತೆ ಲೋಕ ಸುಂ 

 ದರಿಯೆ ನೀ ನೋಡೇ ದಯಮಾಡೇ || ೩ ||


ಪ್ರಳಯಕಾಲದಿ ಪತಿಯು ಮಲಗಬೇಕೆನುತ ವಟ

ದೆಲೆಯಾಗಿ ಹರಿಯ ಒಲಿಸಿದಿ  ಒಲಿಸಿದಿ ಜಗದ ಮಂ--

ಗಳದೇವಿ ನಮಗೆ ದಯವಾಗೆ ॥ ೪ ||


ತಂತುಪಟದಂತೆ ಜಗದಂತರ್ಬಹಿರದಲ್ಲಿ

ಕಾಂತನೊಡಗೂಡಿ ನೆಲೆಸಿರ್ಪೆ । ನೆಲೆಸಿರ್ಪೆ ನೀನೆನ್ನ ಅಂತರಂಗದಲಿ ನೆಲೆಗೊಳ್ಳೆ || ೫ ||


ಈಶಕೋಟಿಪ್ರವಿಷ್ಟೆ ಈಶಭಿನ್ಗಳೆ ಸರ್ವ

ದೋಷವರ್ಜಿತಳೆ ವರದೇಶೇ|ವರದೇಶೇ ಪತಿಯೊಡನೆ

ವಾಸವಾಗೆನ್ನ ಮನದಲ್ಲಿ ॥ ೬ ॥ 


ಆನಂದಮಯ ಹರಿಗೆ ನಾನಾಭರಣವಾದೆ

ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ

ಪಾಣಿ ನೀನೆಮಗೆ ದಯವಾಗೆ || ೭ ||


ಮಹದಾದಿ ತತ್ವಗಳ ಧರಿಸಿ ನಿನ್ನುದರದೊಳು 

ದೃಹಿಣಾಂಡಪಡೆದೆ ಪತಿಯಿಂದ| ಪತಿಯಿಂದ ಶ್ರೀಲಕ್ಷ್ಮಿ

ಮಹ ಮಹಿಮಳೆ ಎಮಗೆ ದಯವಾಗೆ ॥ ೮॥ 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು