|| ಹರಿ ಭಜನೆ ||
ರಾಗ : ಜಂಜೂಟಿ.
ಕುಣಿ ಕುಣಿ ಕುಣಿಯಲೊ ಬಾಲ ಗೋಪಾಲ |
ನೀರದ ನೀಲಾ ಬಾಲ ಗೋಪಾಲ ||ಪ॥
ಯಮುನಾ ತೀರದಿ ಹಿಮ ಕಿರಣನು ತಾ|
ಮಮತೆಯ ತೋರು ತಾ ಬೆಳಗುತಿಹ ॥
ಘಮ ಘಮಿಸುವ ಈ ಸುಮಗಳು ಸೂಸಿರೆ |
ಪ್ರಮದೆಯರೆಲ್ಲರ ಪ್ರೇಮಾಂಗಣದಲಿ ॥1॥
ರಾಗ : ನಾದನಾಮಕ್ರಿಯಾ.
ಗಂಧವ ಮಾರುತ ಬೀರುತಲಿರುವನು |
ಇಂದಿರೆ ಕೂಳಲಿನ ರೂಪದಲೀ |
ಚಂದದಿ ನಾದವ ತುಂಬಲು ಪರಮಾ |
ನಂದವು ಮಾನಸ ಮಂದಿರದಲಿ ನೀ ॥2॥
ರಾಗ : ಪುನ್ನಗ ವರಾಳಿ.
ಕಾಯವು ರೋಮಾಂಚಿತವಾಯ್ತೋ |
ಮಾಯವಾದವು ಮೋಹಗಳು |
ತಾಯಿ ಮಡಿಲು ಸೇರಿದ ಶಿಶುವಂದದಿ |
ಹಾಯವೆನಿಸಿತೋ ಜೀವನಯಾತ್ರೆಯು ॥3॥
ನಾಟ್ಯವಾಡೋ ನೀ ನಾಟ್ಯವಾಡೋ |
ಹಸನಾದ ಮನದಿ ಹೊಸ ನಾಟ್ಯವಾಡೋ ॥
ಕಾಮ ಕ್ರೋಧ ಲೋಭ ಮೋಹ |
ಮದ ಮತ್ಸರ ಬಿಡಿಸೋ |
ಸ್ವಾಮಿ ನಿನ್ನಯ ಪಾದಯುಗಳವೆ |ಕ್ಷೇಮವೆನ್ನಿಸೋ |
ಸಾರಾಸಾರ ವಿವೇಕದಿ ಮೋಕ್ಷದ |
ಸಾರಾಸಾರ ವಿವೇಕದಿ ಮೋಕ್ಷದ | ಕೋರಿಕೆ ಪುಟ್ಟೀಸೋ |
ನಾರಾಯಣ ನಿನ್ನಯ ಕರುಣವು ಭವ |
ಪಾರವ ತೋರುವುದೋ ||
ಸಾರದ ಕರುಣಕೆ ಕಾರಣ ಬಿಂಬದ |
ಮೂರುತಿ ದರುಶನವೋ ||
ಭಾರತಿ ರಮಣನ ಮಂಗಳ ಶಾಸ್ತ್ರ |
ವಚಾರವಿದಕೆ ಮೂಲಾ ॥ ಭಕುತ ಜನ ಪ್ರಸನ್ನಾ |
ಲಕುಮಿ ರಮಣ ಇನ್ನೂ |ತಕಿಟ ತಕಿಟಯೆಂದು ॥
ಶ್ರೀಕೃಷ್ಣಾರ್ಪಣಮಸ್ತು |
0 ಕಾಮೆಂಟ್‌ಗಳು