ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆವರು - Sri Mahalakshmiya Alankarisi Karedaru

 ರಾಗ : ಹಿಂದೋಳ

ತಾಳ : ಆದಿ

kannadabhajanlyrics.com
kannadabhajanlyrics.com

 ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆವರು

 ಶ್ರೀ ಮಹಾಲಕ್ಷ್ಮಿಯ..............  || ಪ ||


 ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ

 ನಾರಾಯಣ ನಿಮ್ಮ ನಾಮ ತಾಳಿ ಪದಕವು

 ಮಾಧವ ನಿಮ್ಮ ನಾಮ ಸುರಗಿ ಸಂಪಿಗೆ ಮೊಗ್ಗು

 ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||


 ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಿಗಳು

 ಮಧುಸೂದನ ನಾಮ ಮಾಣಿಕ್ಯದ ಹರಳು

 ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗ ಮುರಿಗೆ

 ವಾಮನ ನಿಮ್ಮ ನಾಮ ರತ್ನ ಪದಕವು   || ೨ ||


 ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ

 ಹೃಷಿಕೇಶ ನಿಮ್ಮ ನಾಮ ಕಾಲಿಗೆ ಗೆಜ್ಜೆಯು

 ಪದ್ಮನಾಭ ನಿಮ್ಮ ನಾಮ ಮುತ್ತಿನ ಅಡ್ಡಿಕೆಯು

 ದಾಮೋದರ ನಿಮ್ಮ ನಾಮ ರತ್ನ ಪದಕವು || ೩ ||


 ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು

 ವಾಸುದೇವ ನಿಮ್ಮ ನಾಮ ಒಲಿದ ಚೂ.....ಡಾ

 ಪ್ರದ್ಯುಮ್ನ ನಿಮ್ಮ ನಾಮ ಹಸ್ತ ಕಂಕಣ ಬಳೆ

 ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು||೪||


 ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ

 ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ

 ನರಸಿಂಹ ನಿಮ್ಮ ನಮ ಚೌರಿ ರಾಗಟಿ ಗೊಂಡೆ

 ಅಚ್ಚುತ ನಿಮ್ಮ ನಾಮ ಮುತ್ತಿನ ಬೊಟ್ಟು   || ೫ ||


 ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ

 ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು

 ಶ್ರೀಹರಿ ನಿಮ್ಮ ನಾಮ ಕಂಚು ವಂಕಿಯ ತುಳಸಿ

 ಶ್ರೀ ಕೃಷ್ಣ ನಿಮ್ಮ ನಾಮ ನಡುವಿನ ವಡ್ಯಾಣವು||೬||


 ಸರಸಿಜಾಕ್ಷ ನಿಮ್ಮ ನಾಮ ಅರಿಶಿನ ಎಣ್ಣೆ ಹಚ್ಚಿ

 ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು

 ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು

 ನಿಲುವು ಕನ್ನಡಿಯಲ್ಲಿ ಲಲನೆಯ ತೋರಿಸುತ್ತಾ ||೭||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು