ಮಾತು ಮಾತಿಗೂ ಶಂಕರಾ । ಶ್ರೀ ಗುರುವೇ ಸರ್ವೋತ್ತಮ - Matu Matigoo Shankara

 ॥ ಶಿವಸ್ತುತಿ ॥ 

kannadabhajanlyrics.com
kannadabhajanlyrics.com

ರಾಗ. ಕಾ೦ಬೋಧಿ

ತಾಳ :‌ ಛಾಪು 


ಮಾತು ಮಾತಿಗೂ ಶಂಕರಾ ।

ಶ್ರೀ ಗುರುವೇ ಸರ್ವೋತ್ತಮ ನೆನಬಾರದೇ|| 

ಜ್ಯೋತಿ ಸಂಗದಿ ಉರಿದ್ದೋಗೊ ಕರ್ಪೂರದಂತೆ ।

ಪಾಪರಾಶಿ। ನಿಂತುರಿದು | ಹೋಗುವದಾಗಿ ॥

ಮಾತು ಮಾತಿಗೂ ಶಂಕರಾ || ಪಲ್ಲವಿ ||

 

ಸ್ನಾನವಾ ಮಾಡುವಾಗ ।

ನೇಮಲಿ ನಿತ್ಯ ಧ್ಯಾನವಾ ಮಾಡುವಾಗ ||

ಜಾಣತನದಿ ಅನ್ನ ಉಂಡು ಗಂಗಾಮೃತ ।

ಪಾನವ ಮಾಡುವ । ಕಾಲದೊಳ್‌ ಮನವೇ॥ 

ಮಾತು ಮಾತಿಗೂ ಶಂಕರಾ ॥ ೧.


॥ ಬಿಸುಜಾಕ್ಷೆ ನೋಡುವಾಗ । ಕೂಡುತ ನಿತ್ಯ।

ವಸೆದು ಮಾತಾಡುವಾಗ ||

ಬಸುರಲ್ಲಿ ಬಂದಂಥ ಮಗನ ಮುದ್ದಿಸುವಾಗ ।

ಹಸನಾದ ವಸ್ತ್ರಂಗಳುಡುವಾಗ ಮನವೇ॥ 

॥ ಮಾತು ಮಾತಿಗೂ ಶಂಕರಾ || ೨.


॥ ಬೆಟ್ಟವನೇರುವಾಗ|ಕಾಲ್ಮುರಿದಲ್ಲಿ ಥಟ್ಟನೆ ಬೀಳುವಾಗ||

ಅಪ್ಪಭೋಗರದಿ ನಿತ್ಕ । ಲೋಲುಪ್ತಿ ಪಡೆವಾಗ ।

ದಟ್ಟದರಿದ್ರ್ಯ ಬಂದಾಗಲೂ ಮನವೇ ॥

॥ ಮಾತು ಮಾತಿಗೂ ಶಂಕರಾ || ೩.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು