॥ ಜಾನಪದ ॥
ರಾಗ : ಹನುಮತೋಡಿ
ತಾಳ : ತ್ರಿಷನೆಡೆ
kannadabhajanlyrics.com |
॥ ಚೆಲ್ಲಿದರು ಮಲ್ಲಿಗೆಯಾ|ಬಾಣಾಸೂರೇರಿ ಮ್ಯಾಲೆ ॥
ಅಂದಾದ ಚೆಂದಾದ । ಮಾಯ್ಕಾರ । ಮಾದೇವ್ಗೆ ।
ಚೆಲ್ಲಿದರು ಮಲ್ಲಿಗೆಯ ॥ ಚೆಲ್ಲಿದರು ॥
ಮಾದಪ್ಪ ಬರುವಾಗ । ಮಾಳೆಲ್ಲ ಘಮ್ಮೆಂದೋ ॥
ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ।
ಚೆಲ್ಲಿದರು ಮಲ್ಲಿಗೆಯಾ ॥ ಚೆಲ್ಲಿದರು ॥ ೧.
॥ ಸಂಪಿಗೆ ಹೊನ್ನಾಂಗೇ | ಇಂಪಾದೋ ನಿನ್ನ ಪರುಸೆ ॥
ಇಂಪಾದಾ ನಿನ್ನ ಪರುಸೆ ಕಾದಳ್ಳಿ । ಬಯಲಾಗಿ ।
ಚೆಲ್ಲಿದರು ಮಲ್ಲಿಗೆಯಾ ॥ ಚೆಲ್ಲಿದರು || ೨.
ಮಲ್ಲಿಗೆ ಹೂವಿನ ಮಂಚಾ । ಮರುಗಾವ ಮೆಲೊದುಪು ॥
ತಾವರೆ ಹೂವು ತಲೆದಿಂಬು ಮಾದೇವ್ಗೆ |
ಚೆಲ್ಲಿದರು ಮಲ್ಲಿಗೆಯಾ ॥ ಚೆಲ್ಲಿದರು ॥ ೩.
॥ ಹೊತ್ತು ಮುಳುಗಿದರೇನೂ । ಕತ್ತಲಾದರೇನೂ |
ಅಪ್ಪಾನಿನ ಪರುಸೆಗೆ ಬರುವೆವು ಸ್ವಾಮಿ
ಚೆಲ್ಲಿದರು ಮಲ್ಲಿಗೆಯಾ ॥ ಚೆಲ್ಲಿದರು ॥ ೪.
0 ಕಾಮೆಂಟ್‌ಗಳು