|| ಹರಿ ಸ್ತುತಿ ||
kannadabhajanlyrics.com |
ಮುದ್ದು ತಾರೋ ರಂಗ ಎದ್ದು ಬಾರೋ ॥ಪ॥
ಅಂದವಾದ ಕರ್ಪೂರದ ಕರಡಿಕೇಯ ಬಾಯೊಳೊಮ್ಮೆ
|| ಅ.ಪ॥
ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ
ವಶವನಲ್ಲ ಮಗನೆ ನಿನ್ನ ವಿಷವನುಂಡ ಬಾಯೊಳೊಮ್ಮೆ
॥೧॥
ಕಡದ ಸಮಯದಿ ಬಂದು ಕಡೆವ ಸತಿಯ ಕರವ ಪಿಡಿದು ॥
ಕಡೆದ ಬೆಣ್ಣೆ ಮೊಸರನ್ನೆಲ್ಲಾ ಒಡನೆ ಮೆದ್ದ ಬಾಯೊಳೊಮ್ಮೆ
||೨ ||
ತೊರವೆಯ ನಾರಸಿಂಹ ವರದ ಶ್ರೀ ಪುರಂದರ ವಿಠಲ
ಹರವಿಹಾಲನ್ನೆಲ್ಲ ಕುಡಿದ ನೊರೆ ಹಾಲಿನ ಬಾಯೊಳೊಮ್ಮೆ
|| ೩ ||
0 ಕಾಮೆಂಟ್‌ಗಳು