ನಿನ್ನ ನಂಬಿ ಧನ್ಯನಾದೆನೊ ಗುರುದೇವರಾಯ - Ninna Nambi Dhanyanadeno

|| ಗುರು ಸ್ತುತಿ ||

kannadabhajanlyrics.com
kannadabhajanlyrics.com

ನಿನ್ನ ನಂಬಿ ಧನ್ಯನಾದೆನೊ

ಗುರುದೇವರಾಯ.......... ಪ॥ 


ನಿನ್ನ ನಂಬಿ ಧನ್ಯನಾದೆ 

ಜನುಮ ಜನುಮ ಪಾಪ ನಾಶ 

ನೀನೆ ಗತಿಯೆಂದು ನೆಂಬದ 

ಎನ್ನ ನೀನು ಉದ್ಧರಿಸಿದೆ.......  ॥ ಅ.ಪ. ॥ 


ನಾಮ ಮಂತ್ರವನ್ನು ಕೊಟ್ಟಿ

ನಾಯದಿಂದ ರೂಪವೆಂದೆ 

ನಾಮವನ್ನು ಸತತ ಸ್ಮರಿಸೆ 

ದೇವ ದೂರವಿಲ್ಲವೆಂದೆ....       || ೧॥ 


ದುರ್ಲಭವೀ ಮನುಜ ಜನುಮ

ಬರಲಾರದು ಮರಳಿ ಮರಳಿ 

ಗುರುವು ಹೇಳಿದಂತೆ ನಡೆಯೆ 

ಇದೇ ಜನುಮ ಕಡೆ ತಿಳಿಯೆ.... ॥ ೨ ॥ 


ನೇಮ ನಿಷ್ಠೆ ಅಪರಂಪಾರ 

ಭಕ್ತ ಜನಕೆ ತಿಳುಹಿದೆ ಅಪಾರ 

ಭಕ್ತ ಜನಕೆ ನೀ ಮಂದಾರ

ಶಿಷ್ಯಗಣಕೆ ನೀ ಮಂದಾರ 

ಧನ್ಯ ಧನ್ಯ ಗುರುರಾಯ 

ಧನ್ಯ ಧನ್ಯ ಗುರುರಾಯ.....    ॥ ೩ ॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು