ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ - Ninaginta Kundeno Nammamma Jayalakshmi

|| ಲಕ್ಷ್ಮಿ ಹಾಡು ||

ರಾಗ : ಕಾಂಬೋದಿ 

ತಾಳ : ಅಟ್ಟತಾಳ 

 

kannadabhajanlyrics.com
kannadabhajanlyrics.com

ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ 

ನಿನಗಿಂತ ಕುಂದೇನೊ   || ಪ ||


ಮತ್ಸ್ಯಾವತಾರ ನೀನಾದರೆ. - ಆಕೆ

ಮತ್ಸ್ಯಗಂಗಳೆ ತಾನಾದಳೊ 

ಹೆಚ್ಚಿನ ಶಂಖವ ಹಿಡಿದರೆ - ಆಕೆ 

ನಿಚ್ಚ ಶಂಖದ ಕಂಠಳಾದಳಯ್ಯ


ನೀಲವರ್ಣ ನೀನಾದರೆ - ಆಕೆ

ನೀಲಕುಂತಳೆ ತಾನಾದಳೊ

ಲೋಲ ಕಮಲ ನಾಭನಾದರೆ - ಆಕೆ

ಬಾಲ ಕಮಲ ಮುಖಿಯಾದಳಯ್ಯ 


ಬೆಟ್ಟವ ನೀನೊಂದು ಪೊತ್ತರೆ - ಕುಚದ

ಬೆಟ್ಟಗಳೆರಡುನು ತಾ ಪೊತ್ತಳೊ 

ದಿಟ್ಟ ಶೇಷನ ನೀ ತುಳಿದರೆ - ಆಕಿ

ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ


ಗಜರಾಜ ವರದ ನೀನಾದರೆ - ಆಕೆ

ಗಜ ಗಮನೆಯು ತಾನಾದಳಯ್ಯ 

ನಿಜವಾದ ಸಿಂಹ ನೀನಾದರೆ - ಆಕೆ

ಭಜಿಸಿ ಸಿಂಹ ಮಧ್ಯೆಯಾಗಿಪ್ಪಳಯ್ಯ 


ಈ ಪರಿಯಲಿ ಬಹು ಜನಿಸಿದೆ - ಭಲೆ

ಭಾಪುರೆ ಬಾಡದೊಳ್‌ ನೆಲೆಸಿದೆ

ಗೋಪಿಯರ ಮೋಹ ಸಲಿಸಿದೆ - ಚೆಲುವ

ಶ್ರೀಪತಿ ಆದಿಕೇಶವರಾಯ ಮೆರೆದೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು