|| ಶಾರದಾ ಸ್ತುತಿ ||
ರಾಗ : ಶಿವರಂಜನಿ
ತಾಳ : ಆದಿ
॥ ಶಾರದೇ ದಯತೋರಿದೇ ನಿನ್ನ ।
ಕರುಣೆಯ ಕಡಲಲ್ಲಿ । ಮುತ್ತಾದೇ ॥ ಶಾರದೇ ॥
॥ ಹಾಲ ಬೆಳಕಿನಲಿ । ಬಿಳಿಯ ಕಮಲದಲಿ।
ಬಿಳಿಯ ವಸ್ತವನು ಧರಿಸಿ ॥
ಬಿಳಿಯ ಕುಸುಮಗಳ । ಮಾಲೆ ಧರಿಸಿರಲು ।
ಬೆಳ್ಳಿ ವೀಣೆಯನು ಇರಿಸಿ ॥
ನಿನ್ನ ಕಂಗಳಾ ಬೆಳಕನು । ನನ್ನ ಕಂಗಳಲಿ ತುಂಬಿದೆ ॥
ಏಳುಮಗುವೆ ಮೇಲೇಳು ಎಂದು । ಹೊಸಬಾಳು
ತಂದೆಯಮ್ಮಾ || ಶಾರದೇ ॥ ೧.
॥ ಅಂಧಕಾರದಲಿ ನೊಂದು ಬಳಲುತಿರೆ ।
ಬಂದು ಕೈಯ್ಯ ಹಿಡಿದೇ ॥
ಕಂದ ಏಕಳುವೆ । ಮುಂದೆ ದಾರಿಯಿದೆ ।
ಎಂದು ನೀನೆ ನುಡಿದೆ ॥
ತಂದೆ ತಾಯಿಯ ಪುಣ್ಯವೋ|ನಾ ಇಂದು ಮಾಡಿದ ಪೂಜೆಯೋ॥
ಇಂದು ನಿನ್ನ ಕೃಪೆಯಿಂದ ನಾನು
ಆನಂದ ಪಡೆದೆನಮ್ಮ ॥
ಶಾರದೇ ॥ ೨.
0 ಕಾಮೆಂಟ್‌ಗಳು