|| ಅಂಬಾ ಸ್ತುತಿ ||
ಅಂಬ ಪಾಲಿಸಂಬ ಪಾಲಿಸೇ ತಾಮ್ರಗೌರಿ
ಬೆಂಬಿಡದೆ ಎನ್ನ ರಕ್ಷಿಸೇ ||
ಎಷ್ಟು ದೂರದಿಂದ ಬಂದೆನೇ,
ಅಂಬ ನಿನ್ನ ಕೀರ್ತಿಯನ್ನು ಕೇಳಿ ನಿಂದೆನೆ
ಮೂರ್ತಿಯನ್ನು ತೋರಿಸಮ್ಮ
ಮುಕ್ತಿ ಪಥವ ಪಾಲಿಸಮ್ಮ
ಕರ್ತೃ ಶಂಕರನ ರಾಣಿ
ಕಾಂತೆಯನ್ನು ರಕ್ಷಿಸಮ್ಮ ||
ಹಸ್ತ ಕಡಗ ಹೊನ್ನ ಕಂಕಣಾ,
ಒಪ್ಪುತಿರುವ ಮುತ್ತಿನ್ವಂಕಿ ತೋಳಬಾಪುರಿ
ಮುತ್ತಿನೋಲೆ ಹೊನ್ನಿನ
ಮೂಗುತಿಯ ಥಳಥಳಿಸಿ
ಕರ್ತೃ ಶಂಕರನ ರಾಣಿ
ಕಾಂತೆಯನ್ನು ರಕ್ಷಿಸಮ್ಮ ||
ಚರಣದಂದಿಗೆ ಬೆರಳ ಮುದ್ರಿಕೆ,
ಘಲಿರೆಂದು ಬರುವ ಬರವ ಎನಗೆ ತೋರಿಸೆ
ನಡುವಿನ ಒಡ್ಯಾಣ ಹೊಳೆವ
ನಿರಿಯ ಪೀತಾಂಬರವು ಅಲುಗೆ
ದೃಢದಿ ಭಕ್ತರನ್ನು ಪೊರೆವ
ಪರಮ ಪಾವನೆ ಮೋಹನ್ನೆ ||
ದೇಶದಧಿಕ ಎನಿಸಿ ಮೆರೆಯುವ,
ಗೋಕರ್ಣ ಆ ಪುರದಿ ನೆಲೆಸಿ ನಿಂತಿಹ
ಕಾಶಿಗಿಂತ ಅಧಿಕವೆಂದು
ತ್ರಾಸಿನಲ್ಲಿ ತೂಗುತಿರುವ
ಈಶನಾ ರಾಣಿಯೇ
ಸಂತೋಷದಿಂದ ಸಲಹೆ ಬಂದು ||
0 ಕಾಮೆಂಟ್‌ಗಳು