ಎಂಥ ಚೆಲುವ ನಮ್ಮ ಹನುಮ, ಎಂಥ ಸುಗುಣಿಯಮ್ಮ - Entha Cheluva Namma Hanuma Entha Suguniyamma

|| ಹನುಮ ಸ್ತುತಿ ||

ಶ್ರೀ ಶ್ರೀ ಬಿಂದುಮಾಧವ ಸ್ವಾಮಿ ವಿರಚಿತ 



ಎಂಥ ಚೆಲುವ ನಮ್ಮ ಹನುಮ,

ಎಂಥ ಸುಗುಣಿಯಮ್ಮ 

ಅಂಥ ಇಂಥ ಹರಿಯಲ್ಲ ಈತ

ಅತ್ಯಂತ ಜ್ಞಾನಿಯಮ್ಮ || ಎಂಥ ಚೆಲುವನಮ್ಮ


ಜಾಂಬವಂತನಂತೆ, 

ಆತನ ಮಾಡಿನಂತೆ ಹನುಮ

ಬೆಟ್ಟ ಹತ್ತಿ ಬಂಡೆಗಳಸೀಳಿ

ಗಗನಕ್ಕೆ ನೆಗೆದನಮ್ಮ || ಎಂಥ ಚೆಲುವನಮ್ಮ


ಲಂಕೆ ಸೇರಿಬಿಟ್ಟ 

ಕಪಿವರ - ತಾಯ ಹುಡುಕುತಿದ್ದ

ರಾಮನಾಮ, ಮನೆಯೊಂದರಲ್ಲಿ,

ತಾ ಕೇಳಿ ಚಕಿತನಾದ || ಎಂಥ ಚೆಲುವನಮ್ಮ, 


ಸೀತೆಯನ್ನು ಅರಸಿ - 

ಬಂದನೆ - ಶೋಕ-ಹರಿಪ-ವನಕೆ 

ತಾಯ ಕಂಡು - ಬಲು ಹರ್ಷಗೊಂಡು

ಕುಣಿದಾಡಿ ಬಿಟ್ಟ ಮನದಿ || ಎಂಥ ಚೆಲುವನಮ್ಮ, 


ಕಣ್ಣುತೇವಗೊಂಡು

ಮೆಲ್ಲನೆಅಮ್ಮ - ಎಂದ ಧೀರ,

ರಾಮಕಥೆಯ - ಪಿಸು ಮಾತಲರುಹಿ 

ಕೃತ ಕೃತನಾದ ವೀರ || ಎಂಥ ಚೆಲುವನಮ್ಮ, 


ಅಕ್ಷಯನ್ನ ಸದೆದು. 

ಬ್ರಹ್ಮನ. ಅಸ್ತ್ರವೆನಲು ಮಣಿದ

ರಾವಣನ್ನ ಸಭೆಯಲ್ಲಿ ನಿಂದು

ನೀ ಕೆಟ್ಟೆ - ದುಷ್ಟ - ಎಂದ || ಎಂಥ ಚೆಲುವನಮ್ಮ


 ಬಾಲಕ್ಕೆ ಬಟ್ಟೆ ಕಟ್ಟಿ

 ಬೆಂಕಿಯ ಹಚ್ಚಿ ಎಣ್ಣೆ ಸುರಿದು 

 ಬಟ್ಟೆಯಿತ್ತ ಮನೆ ಮನೆಗು ಬೆಂಕಿ

 ರೋಷದಲಿ ಹನುಮ ಉರಿದ||ಎಂಥ ಚೆಲುವನಮ್ಮ 


ಕಂಡೆ, ತಾಯ - ಅಲ್ಲಿ 

ಅಂದು - ರಾಮಪಾದಕೆರಗೆ,- (ಪ್ರಭು)

ಸೇತು ಕಟ್ಟಿ ಸಾಗರನ ದಾಟಿ -

ಹರಿಸೇನೆ ಲಂಕೆಯಿಡೆಗೆ || ಎಂಥ ಚೆಲುವನಮ್ಮ


ದೈತ್ಯರನು ಬಡಿದ - 

ರಾವಣ ಯೋಧರನ್ನು ತರಿದ,

ಇಂದ್ರಜಿತ್ತು - ಆ ಕುಂಭಕರ್ಣ

ಯಮಸದನ ಸೇರೆ ನಲಿದ || ಎಂಥ ಚೆಲುವನಮ್ಮ


ಲಕ್ಷ್ಮಣನ್ನ ಉಳಿಸೇ

ಸಂಜೀವನಾದ - ಅಮಮ |।

ರಾವಣನ್ನ, ಶ್ರೀರಾಮ ಸಿಗಿಯೆ,

ಕುಣಿದಾಡಿಬಿಟ್ಟ ಹನುಮ || ಎಂಥ ಚೆಲುವನಮ್ಮ


ರಾಮ ಸೀತೆ  ಮತ್ತೆ  | ಸೇರಲು ಕಾರಣಾದ ಭೂಪ

ನಲಿದು ನಲಿದು ಬೆಲಗೂರು ಸೇರಿ

ಆಗಿಹನು ಬಿಂದು ರೂಪ || ಎಂಥ ಚೆಲುವನಮ್ಮ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು