ಏನು ಅಂದವೋ ಹನುಮ ಏನು ಚಂದವೋ - Enu Andavo Hanuma Enu Chandavo

|| ಹನುಮ ಸ್ತುತಿ ||

ರಚನೆ : ಶ್ರೀ ಶ್ರೀ ಶ್ರೀ ಬಿಂದುಮಾಧವ ಸದ್ಗುರುಗಳು 

kannadabhajanlyrics.com
kannadabhajanlyrics.com


ಏನು ಅಂದವೋ ಹನುಮ ಏನು ಚಂದವೋ

ಏನು ಅಂದವೋ ಹನುಮ ಏನು ಚಂದವೋ ||ಪ||


ನೀನು ಭಕ್ತ ಪರಮ ಸಾರ

ರಾಮನಾಮ ಬಾಳು ಪೂರ

ನೀನೊ ಬೀದಿಯಗಲ ಮಾರ

ಬಾರ ಬಾರ ಬಾರ ಬಾರ

ಏನು ಅಂದವೋ ಹನುಮ ಏನು ಚಂದವೋ||೧||


ಬೆಟ್ಟವನ್ನು ಎತ್ತುವಾಗ

ಶರಧಿಯನ್ನು ದಾಟುವಾಗ

ದೈತ್ಯರನು ಕೊಚ್ಚಿ ಕೊಚ್ಚಿ

ಬಿಸುಟು ನೀನು ಪೋಗುವಾಗ

ಏನು ಅಂದವೋ ಹನುಮ ಏನು ಚಂದವೋ||೨||


ಲಂಕೆಯಲ್ಲಿ ತೂರಿ ಸಾಗಿ

ಬಿಂಕವನು ತೋರಿ ಬಿಟ್ಟು

ಮಾತೆಗಂಗುಲಿಯಕವನು

ಕೊಟ್ಟು ನೀನು ನಿಂತಾಗ

ಏನು ಅಂದವೋ ಹನುಮ ಏನು ಚಂದವೋ||೩||


ಲಂಕೆಯನು ದಹಿಸುವಾಗ

ಶಂಕೆಯಿಲದೆ ನಡೆಯುವಾಗ

ಶಂಕರನ ನೆನೆದು ನೀನು

ಲಂಕೆಯಿಂದ ಹಾರಿದಾಗ 

ಏನು ಅಂದವೋ ಹನುಮ ಏನು ಚಂದವೋ||೪||


ಅಲ್ಲಿ ಇಲ್ಲಿ ತಿರುಗುವಾಗ

ನಿನ್ನ ಶಕ್ತಿ ತೋರುವಾಗ

ಭಕುತ ಜನಕೆ ಸತತ ನೀನು

ಅಭಯವಿತ್ತು ನಡೆಯುವಾಗ

ಏನು ಅಂದವೋ ಹನುಮ ಏನು ಚಂದವೋ||೫||


ದಾರಿಯಲ್ಲಿ ನಡೆಯುವಾಗ 

ಕುಣಿದು ಕುಪ್ಪಳಿಸುವಾಗ 

ತಾಳವಾದ್ಯ ನುಡಿಸಿ ನೀನು 

ರಾಮನಾಮ ಸ್ತುತಿಸುವಾಗ 

ಏನು ಅಂದವೋ ಹನುಮ ಏನು ಚಂದವೋ||೬|| 


ದೈತ್ಯರನು ಕೊಲುವ ಸಮಯ

ರಾಮನೆದರು ಕುಳಿತ ಸಮಯ

ರಾಮನಿಂಗೆ ಸೀತೆಯಿತ್ತ

ಚೂಡಾಮಣಿಯನಿತ್ತ ಸಮಯ

ಎನು ಅಂದವೋ ಹನುಮ ಏನು ಚೆಂದವೋ||೭|| 


ಸದಿಗಳನು ದಾಟಿ ದಾಟಿ 

ಬೆಟ್ಟಗಳನು ನೆಗೆದು ನೆಗೆದು 

ಪಟ್ಟಣಗಳ ಸುತ್ತಿ ಕಡೆಗೆ 

ಬೆಲಗೂರ ಸೇರ್ದೆಯಲ್ಲಾ । 

ಎನು ಅಂದವೋ ಹನುಮ ಏನು ಚಂದವೋ||೮||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು