ಏನು ಮರುಳನಾದೆ ಶಿವ ಶಿವ ಎಂಥ ಮರುಳನಾದೆ - Enu Marulanade Shiva Shiva Entha Marulanade


|| ತತ್ವ ಪದ ||

ರಚನೆ : ಶ್ರೀ ಶ್ರೀ ಶ್ರೀ ಬೆಲಗೂರು ಬಿಂದುಮಾಧವ  ಶರ್ಮ ಗುರುಗಳು 

kannadabhajanlyrics.com
kannadabhajanlyrics.com

ಏನು ಮರುಳನಾದೆ 

ಶಿವ ಶಿವ ಎಂಥ ಮರುಳನಾದೆ

ಹಲುವು ಜನ್ಮಗಳ ಎತ್ತಿ ಬಂದರೂ 

ತನ್ನ ತಿಳಿಯದ್ಹೋದೆ , 

ಶಿವ ಶಿವ ಏನು ಮರುಳನಾದೆ|| 


ಸಾವ ತನಕ ಕಾಯಾ, 

ಶಿವ ಶಿವ ಕಾಯೊ ಕೆಲಸವಾಗಿ

ಮಾಯೆಯಾಟದಲಿ ಸಿಲುಕಿ ಕೂಪದಲಿ 

ನಿನ್ನ ಮರೆತುಹೋದೆ 

ಶಿವ ಶಿವ ನಿನ್ನ ಮರೆತುಹೋದೆ || 


ಗಿರಕಿಯಾಟವಾಡೆ 

ಶಿವ ಶಿವ ಜಗಕೆ ಬಂದೆನಲ್ಲ

ಅಲೆದು ಅಲೆದು ಬುವಿಯೆಲ್ಲ ಸುತ್ತಿ ಮರುಳಾಗಿ ನಿಂತೆನಲ್ಲ 

ಶಿವ ಶಿವ ನಿನ್ನ ತೊರೆದೆನಲ್ಲ| | 


ತಂದ ಎಲ್ಲವೆಲ್ಲ

ನಾಯಿಯ ತಲೆಯ ಬುತ್ತಿಯಣ್ಣ

ಪುಣ್ಯ ಬಿದ್ದು ಮಣ್ಣಾಗೊ ಮೊದಲು

ಶಿವನರಸಬೇಕು ಅಣ್ಣ ಸುಮ್ಮನೆ ಕೂರಬೇಡ ಅಣ್ಣ || 


ಹೊಟ್ಟೆ ಕಿಚ್ಚಿನಿಂದ 

ಇತರರ ಗಂಟ ಬಯಸಿ ಬಿಟ್ಟೆ

ಕಂಡ ಕಂಡ ಜನರೆಲ್ಲ ಜರೆದು 

ಮಾತ್ಸರ್ಯ ತಾಳಿಬಿಟ್ಟಿ 

ಶಿವ ಶಿವ ಮೋಸ ಮಾಡಿಬಿಟ್ಟೆ || 


ಹಗಲುರಾತ್ರಿ ಎನದೇ 

ಸತತವು ದೇಹ ದಣಿಸಿಬಿಟ್ಟೆ

ದೇಹ ದಣಿಸಿ ನನ್ನನ್ನೇ ಮರೆತು ಈ 

ಕಾಣ್ಕೆ ಸತ್ಯವೆಂದೆ 

ಶಿವ ಶಿವ ದೂರ ನಾನು ಬಂದೆ || 


ಭಸ್ಮ ಧರಿಸಲಿಲ್ಲ ಹಣೆಯಲಿ,

ಗಂಧ ಹಚ್ಚಲಿಲ್ಲ ನಾಮ ಜಪಕೆ ಸಾಧನವು ಆದ

ಜಪಮಾಲೆ ಹಿಡಿಯಲಿಲ್ಲ

ಶಿವ ಶಿವ ಮಾಯೆ ತುಂಬಿತಲ್ಲ|| 


ಸಂತ ಜನಗಳನ್ನು ಅರಿಯದೆ ಭ್ರಾಂತನಾದೆನಲ್ಲ

ಸಾರ್ಥ ಬದುಕು ಅರ್ಥಕ್ಕೆ ಸಿಲುಕಿ 

ನಿಶ್ಶೇಷವಾಯಿತಲ್ಲ ಒಂದೂ ಅರ್ಥವಾಗಲಿಲ್ಲ|| 


ಎಂಥಾ ಮನುಜನಾದೆ ಶಿವನೇ

ಎಂಥಾ ಮನುಜನಾದೆ

ಎಷ್ಟು ಜನ್ಮ ನಾನೆತ್ತಿ ಎಂದರೂ

ಕೊಟ್ಟು ಕಲಿಯದಾದೆ ದಾನವ ಬಿಟ್ಟು ಭ್ರಷ್ಟನಾದೆ || 


ಹನುಮನಿರುವ ಅಲ್ಲಿ ಶ್ರೀ ಬೆಲಗೂರ ನಡುವಿನಲ್ಲಿ

ಪವನ ಪುತ್ರ ಶ್ರೀ ನಾಮ ಬಿಟ್ಟೆ

ನಾ ಬಿಂದುವರಿಯಲಿಲ್ಲ ನಾನೇ ಅಡ್ಡಿಯಾದೆನಲ್ಲ|| 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು