|| ಬಿಂದುಮಾಧವ ಸ್ತುತಿ ||
ರಚನೆ : ಧೃವಕುಮಾರ್ ಅವಧಾನಿ (ಧ್ರುವಣ್ಣ)
kannadabhajanlyrics.com |
ಪ್ರೇಮಮೂರುತಿ ನೀಲಮಾಧವ
ಛಾಯಾಸುತನ ಕಥೆ ಪಾಡುವನಸು |
ಬಿಂದುವಿಸ ಪದಪುಂಜಕೆ ಭಕ್ತನು
ಕರ್ಣಾನಂದವ ಪಡೆಯುವಸು ॥ಪ।
ನೊಂದು ಬಂದವಗೆ ಅಭಯವರನಿತ್ತು
ಕರುಣೆಯ ತೋರುತ ಸಲಹುವನು |
ಕೇಳುವ ಮೊದಲೇ ಕಷ್ಟವನರಿತು
ಪರಿಹಾರವನಿವ ತಿಳಸುವಸು ॥೧॥
ಕಲ್ಲಲಿ ಶಿಲ್ಪವು ಮೂಡುವಂದದಲಿ
ಶರಣಗೆ ಗುರು ತಾ ಕರುಣಿಪಸು |
ಅಹಂಭಾವವನು ಸಾಮದಿ ಅಳಿಸಿ
ಆತ್ಮಾರಾಮನ ತೋರುವನು ॥೨॥
ಮನ್ನಣೆ ದಾಹದ ಸಣ್ಣ ಜನರನು
ಒಮ್ಮೆಯು ನೋಡದೆ ನಡೆಯುವನು ।
ಕರ್ಮವ ಕಳೆದು ಮರ್ಮವ ತಿಳಸುತ
ರವಿಸುತ ಶನಿಗೂ ಸಮನಿವನು ॥೩॥
ಹೃನ್ಮಂದಿರದಲಿ ಅತ್ಮಲಿಂಗವನು
ಜ್ಞಾನಗಂಗೆಯಲಿ ತೊಳೆಯುವನು ।
ಅಂಡಪಿಂಡಕೂ ಒಡೆಯನು ಎನುತಾ
ಬ್ರಹ್ಮಾಂಡವಾಳುತ ಕುಳಿತಿಹನು ॥೪॥
ನಿತ್ಯಸತ್ಯದ ಅವನವತಾರವ
ಹೃದಯಾಳದಿ ತೋರುವನು ॥
ಹುಟ್ಟು ಸಾವಿನ ಕೊಂಡಿಯ ಕಳಚಿ
ಭವಸಾಗರವನು ದಾಟಿಪನು ॥೫॥
0 ಕಾಮೆಂಟ್‌ಗಳು