ಎಷ್ಟು ಚೆಲುವನೋ ರಾಮ ನೀನೆಷ್ಟು ಚೆಲುವ - Eshtu Cheluvano Rama Neeneshtu Cheluva

|| ರಾಮ ಸ್ತುತಿ ||

 ರಚನೆ : ಶ್ರೀ ವಿದ್ಯಾಸಾಗರ ಮಾಧವ ತೀರ್ಥರು 



ರಾಗ : ಹಿಂದೋಳ 

ಎಷ್ಟು ಚೆಲುವನೋ ರಾಮ ನೀನೆಷ್ಟು ಚೆಲುವ 

ವೀರ ರಾಮನೆಷ್ಟು ಚೆಲುವನೋ ರಘುವರ

ರಾಮ ರಾಮ ವೀರ ರಾಮ ರಾಮ ರಾಮ ವೀರ ರಾಮ। 


ಅರುಣಾ ಕಿಸಲಯಗಲು ಚರಣಂಗುಳಿಗಳು |

ಹವಳದಂತೆ ಹೊಳೆಯುವ ನಖಾವಳಿಗಳು | 

ಶಿಲೆಯ ಬಾಲೆ ಚೆಲುವೆಯ ಮಾಳ್ದ ಶ್ರೀ ಪಾದಗಳು |

ಸಿರಿ ತೊಡೆಯ ಮೇಲರಳುವ ತಾವರೆ ಸುಮಗಳು||೧.


 ರಾಗ: ಕಾಪಿ 

ದತ್ತಿ ಕಟ್ಟಿದ ಪಟ್ಟು ವಸ್ತ್ರದ ವಿಲಾಸ | 

ಕಾಣಲಾಶ್ಚರ್ಯ ಕಟಿ ಬದ್ಧ ಕನಕ ಖಡ್ಗ ||

ಕಮಲ ಸಂಭವ ಮಣಿ ಹಾರ ಕಂಠದಿಂದ 

ಬಾಣ ತೂಣೀರು ಚಾಪಾಡ್ಯ ಬಾಹು ಯುಗ್ಮ||೨.


ರಾಗ : ಮೋಹನ

ಶಾರದೇಂದು ಚಂದ್ರಿಕೆ ಪರಿಚರ್ಯಕಿಳಿವ

ಮಂದಹಾಸ ಸುಂದರ ಮುಖದಂದದ ಝರಿ

ಒಂದು ಬಾರಿ ನೋಡಿದರೆ ಮತ್ತೊಂದು ಬಾರಿ

ನೋಡಿ ನೋಡಿದರು ದಣಿವು ಮಾಡದ ಅಂದ||೩.


ರಾಗ : ಕಲ್ಯಾಣ ವಸಂತ

ಅಂಗುಲಿಗಳಿಗೆ ಬಂಗಾರದ ಉಂಗುರಗಳು

ಬಾಣ ಬಿಲ್ವಿಡಿದಂಗುಳಿ ಭಂಗಿಮೆಗಳು

ಬಗೆಬಗೆ ಹೊಸ ವಿಲಾಸದ ಮುಗುಳು ನಗುವು

ಅರಳಿದ ಬೆಳದಿಂಗಳು ಅಧರದಾ ಝಗೆ ||೪.


ರಾಗ : ಅಭೋಗಿ

ಲೋಹ ಮಯ ರೂಪದಲ್ಲಿಯೂ |

ಮೋಹ ಗೊಳಿಪ ನೂತನವದು ||

ನೂತನವದು ಮಾತುಗಳಿಗು ಮಾನಸಕ್ಕು |

ಜ್ಞಾನ ಶಕ್ತಿಗು ನಿಲುಕದೋ ನಿನ್ನ ಚೆಲುವು ||


ರಾಗ : ಬೃಂದಾವನಿ

ನಾರಿಯರ ನಾಚಿಸುವ ಚೆಲ್ವು |

ಮಾರನೋಡಿ ಮೋರೆ ತಗ್ಗಿಸಿ ಹೋಗುವ ಧೀರ ಚೆಲುವು||

ಸೀರಜಾತೆಗೆ ಮುಡುಪಾಗಿ ಧಾರೆ ಎರೆದ |

ಪಾರುಗಾಣದಪಾರ ದಾಂಪತ್ಯ ಚೆಲುವು ||೬||


ರಾಗ : ಹಿಂದೋಳ

ಸೌಖ್ಯ ಯೋಶಿದ್ರಮಣ ನಿನ್ನಲೇ ಐಕ್ಯ ಚೆಲುವು |

ವ್ಯಾಖ್ಯ ಮಾಡಲಸಾಧ್ಯ ಅವ್ಯಾಹೃತವದು

ಮುಖ್ಯ ಶಬ್ದಾಭಿಮಾನಿಗು | ಮೋಹಕವದು॥ 

ಸೌಖ್ಯಮಯ ಸುಂದರಾಕಾರ ಶ್ಯಾಮಲಾಂಗ ||೭||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು