ಶ್ರೀ ವಾದಿರಾಜರ ರಚನೆ.
ರಾಗ : ಶ್ರೀ
ತಾಳ : ಏಕ
ಇಂದಿರೆ ಮಂದಿರದೊಳು ನಿಂದಿರೆ ||ಪ|
ಇಂದಿರೆ ಹೊಂದಿದೆ ನಿನ್ನಾ ಮುದ |
ದಿಂದ ಪಾಲಿಸು ನಿತ್ಯ ಎನ್ನ ಆಹಾ ॥
ಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪ।
ದಿಂದ ಪೂಜಿಸುವೆನು ಕುಂದುಗಳೆಣಿಸದೆ ||ಅ.ಪ| |
ಇಂದೀವರಾದಿವರ್ಭೂಕೆ ಶತಾ |
ನಂದ ಸರ್ವರಿಗತಿ ಪ್ರೀತೆ ಮು |
ಕುಂದ ಕಥಾಮ್ಯತ ಜಾತೆ ಕುಂದದ |
ಮಂದಾರ ಮಾಲಾ ವಿರಾಜಿತೆ ಆಹಾ ॥
ಮಂದರೋದ್ದರ ಗೋವಿಂದರಾಜನ ರಾಣಿ |
ಚಂದದಿ ಚರಣಾರವಿಂದವ ಭಜಿಸುವೆ ॥1॥
ಘಲು ಘಲುಗೆಜ್ಜೆಯನಾದದಿಂದ |
ಫಳ ಫಳಿಸುವ ದಿವ್ಯ ಪಾದದೋಳು ॥
ಪೀಲ್ಯ ಕಾಲುಂಗುರ ನಾದ ಅಂಘ್ರಿ ||
ಚಲಿಸುವ ದಿವ್ಯ ಸುಸ್ವಾದ ಆಹಾ॥
ಕಾಲಲಂದಿಗೆ ಗೆಜ್ಜೆ ರುಳಪಿಸುತ್ತಾ ಝಣ |
ಝಣರೆನ್ನುತ ನಮ್ಮಾಲಯದೊಳು ನಿಲ್ಲೆ |
ಪಾಲವಾರಿಧಿ ಕನ್ಯೆ ॥2॥
ಉಟ್ಟ ಪಟ್ಟೆಯ ನೀಲವಲವು ನಡುವಿ |
ನಲ್ಲಿಟ್ಟ ಕಿಂಕಿಣಿ ಪಟ್ಟಿ ರುಳಪು |
ಬಹು ಬಟ್ಟು ಕುಚಾಗ್ರದ ಕದಪು ತೊಟ್ಟ |
ಕಂಚಕಿ ಸೈರ್ಯಗೊಲಪು ಆಹಾ ॥
ಕಂಠದೋಳೊಪ್ಪುವಂಥ ಕಂಠಿ ಮಾಂಗಲ್ಯ ಸೂತ್ರ |
ಕಂಠ ಕಂಠೀರವದಂತೆ ಕೋಟೆ ಸೂರ್ಯರ ಕಾಂತಿ ॥3॥
ಹರಡಿ ಕಂಕಣ ವಂಕಿ ಡೋರ್ಯ ಕೊರ।
ಳೊಳಗೆ ನಾನಾ ವಿಧದ್ದಾರ ಬಾಯ ॥
ಲಿರುವವೋ ಕರ್ಪೂರ ವೀಳ್ಯ ಸಾರೆ |
ಸುರಭಿ ನಾಸಿಕ ಚಂಪಕ ಪುಷ್ಪಕ ಹಾರ ।
ಎರಳೆ ಗಂಗಳೆ ಸಿರಿ ಅರಳೆಲೆ ಕುಂಕುಮ ॥
ಹೆರಳ ಗೊಂಡೆಗಳಿಂದ ಹರಿಯ ನೀ ಮೋದಿಸುವೆ ॥4॥
ಜಯ ಜಯ ವಿಜಯ ಸಂಪೂರ್ಣೆ ಭಕ್ತ।
ಭಯ ನಿವಾರಣೆ ಎಣೆಗಾಣೆ ಎನ್ನ ॥
ಕಾಯ್ವರ ಅನ್ಯರ ಕಾಣೆ ಶೇಷ |
ಶಯನನ್ನ ತೋರೆ ಸುಶ್ರೇಣೆ ಅಹಾ |
ಕೈಯ್ಯ ಪಿಡಿದು ಭವ ಭಯವ ಪರಿಹರಿಸೆ ಸಿರಿ |
ಹಯವದನನ ದಯವ ಪಾಲಿಸೇ ಲಕ್ಷ್ಮಿ ||೫||
0 ಕಾಮೆಂಟ್‌ಗಳು