|| ಗೌರಿ ಹಾಡು ||
ಗಿರಿಯ ತನುಜೆ ಕರುಣದಿಂದ ಪೊರೆಯೆ ನಮ್ಮನು
ಗೌರಿ ಪೊರೆಯೇ ನಮ್ಮನು॥ ಪಲ್ಲವಿ.
ಶಂಬುರಾಣಿ ಅಂಬುಜಾಕ್ಷಿ ಶುಂಬ ಮರ್ಧಿನಿ
ಕಂಬುಕಂಠಿ ದೇವತಾ ಕದಂಬ ಪೋಷಿಣಿ
ಗೌರಿ ಕದಂಬಪೋಷಿನಿ॥ ೧.
ಪಾತಕಾರಿ ಕಲುಷಹರಣೆ ವಿಭೂತಿದಾಯಿನಿ
ಪೂತಚರಿತೆ ಕಾರ್ತಿಕೇಯ ಮಾತೆ ಭವಾನಿ
ಗೌರಿ ಮಾತೆ ಭವಾನಿ॥ ೨.
ನಾರದಾದಿ ವಿನುತ ಚರಣೆ ವಾರಿಜಾಸನೆ
ಕೋರಿಭಜಿಸೆ ಮುದವ ನಮಗೆ ನೀಡು
ಭವಾನಿ ಗೌರಿ ನೀಡು ಭವಾನಿ॥ ೩.

0 ಕಾಮೆಂಟ್‌ಗಳು