ವಾಣಿ ಪಾಣಿ ಮಾಣಿ ಮೂರ ಕಟ್ಟಿದವನು - Vani Pani Mani Moora Kattidavanu

|| ತತ್ವ ಪದ ||

ರಾಗ : ಕಾಮವರ್ಧಿನಿ

ತಾಳ : ಆದಿ 

kannadabhajanlyrics.com
kannadabhajanlyrics.com, belaguru swamiji

॥ವಾಣಿ ಪಾಣಿ ಮಾಣಿಮೂರ ಕಟ್ಟಿದವನು||

ಶ್ರೇಷ್ಠನಪ್ಪನು||

ವಾಣಿ ಪಾಣಿ ಮಾಣಿಮೂರ ಬಿಚ್ಚಿದವನು |

ಬ್ರಷ್ಠನಪ್ಪನು || ವಾಣಿಪಾಣಿ ॥ ಪಲ್ಲವಿ.


||ಸುಳ್ಳು ರಕ್ಕು ಚಾಡಿ ಕುಹಕಆಡಬೇಡ|ವಾಕ್ಕಿನಿಂದ||

ಒಳ್ಳೆ ನುಡಿಯು । ಮಂತ್ರ ಧ್ಯಾನ । ಬಿಡಲುಬೇಡ ।

ಮನಸಿನಿಂದ || ವಾಣಿಪಾಣಿ ||


||ಕಳವು ಹಿಂಸೆ ಕೊಲೆಗಳನ್ನು|

ಮಾಡಬೇಡ|ಹಸ್ತದಿಂದ ।

ಸಲಿಗೆಯಿಂದ ಬೇಡಿದರೆ ಕೊಡವ ಶಂಭು ।

ದೃಢದಿ ನಂಬು ॥ ವಾಣಿಪಾಣಿ ॥ 


||ಮೋಹಬಿಡು ಕಾಮಿನಿಯರ ಕೂಟದಲ್ಲಿ|ನೋಟದಲ್ಲಿ||

ಮೋಹಬಿಡು ಗುರುರಂಗನಡಿಯಲ್ಲಿ । ಮನಸಿನಲ್ಲಿ ॥

ವಾಣಿಪಾಣಿ ॥ 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು