||ಹರಿ ಸ್ತುತಿ||
ರಾಗ : ಮೋಹನ
ತಾಳ : ಆದಿತಾಳ
ಹರಿಯ ನೆನೆಯದ | ನರಜನ್ಮವೇಕೆ | ನರ |
ಹರಿಯ ಕೊಂಡಾಡದಾ| ನಾಲಿಗೆಯೇಕೆ ।ಪಲ್ಲವಿ|
ವೇದವನೋದದಾ | ವಿಪ್ರತಾನೇಕೆ ।
ಕಾದಲರಿಯದಾ | ಕ್ಷತ್ರಿಯನೇಕೆ ।
ಕ್ರೋಧವ ಬಿಡದಾ ಸನ್ಯಾಸಿ ತಾನೇಕೆ |
ಆದರವಿಲ್ಲದ | ಅಮೃತಾನ್ನವೇಕೆ ॥ ೧.
ಸತ್ಯಶೌಚ್ಯವಿಲ್ಲದ ಆಚಾರವೇಕೆ ।
ನಿತ್ಯನೇಮವಿಲ್ಲದ | ಜಪತಪವೇಕೆ |
ಭಕ್ತಿಲಿ ಮಾಡದ | ಹರಿ ಪೂಜೆಯೇಕೆ |
ಉತ್ತಮರಿಲ್ಲದ | ಸಭೆ ತಾನೇಕೆ ॥ ೨.
ಮಾತಾ ಪಿತರ | ಸಲಹದ ಮಕ್ಕಳೇಕೆ ।
ಮಾತು ಕೇಳದ ಸೊಸೆ । ಗೊಡೆತನವೇಕೆ |
ಅನಾಥರಾದೆ ಮೇಲೆ | ಕೋಪವದೇಕೆ |
ತಿಳಿದು ಬುದ್ಧಿ ಪೇಳದಾ | ನೆರೆಹೊರೆಯೇಕೆ | ೩.
ಅಳಿದಳಿದ್ಹುಟ್ಟುವ | ಮಕ್ಕಳು ಏಕೆ |
ನೀತಿಯ ಪೇಳದ | ಗುರುತಾನೇಕೆ |
ನಳಿನನಾಭ ಶ್ರೀ | ಪುರಂದರ ವಿಠ್ಠಲನಾ |
ಚೆಲುವ ಮೂರ್ತಿಯ ನೋಡದ | ಕಣ್ಣ್ಗಳೇಕೆ ॥ ೪.
0 ಕಾಮೆಂಟ್‌ಗಳು