ಮಂಗಳಾರತಿಯನ್ನು ಬೆಳಗಿರೆ ಮಂಗಳಾಂಗಿಯರೆಲ್ಲರು - Mangalaratiyannu Belagire Mangalangiyarellaru

|| ಗಣಪತಿ ಆರತಿ ಹಾಡು ||



ಮಂಗಳಾರತಿಯನ್ನು ಬೆಳಗಿರೆ

ಮಂಗಳಾಂಗಿಯರೆಲ್ಲರು ॥ಪ॥ 

ಅಂಗನಾಮಣಿ ಗೌರಿದೇವಿ 

ಶುಭಾಂಗ ಮೃದ್ಧವ ಗಣಪಗೆ ॥ಅ.ಪ॥ 


ದಾಸರೀಪ್ಸಿತವನ್ನು ಸಲಿಸುವ 

ಈಶನಂದನ ಗಣಪಗೇ 

ಪಾಶ ಅಂಕುಶ ಧರಿಸಿಹ 

ವಿಘ್ನೇಶ ವಿಘ್ನ ವಿನಾಶಗೇ॥1॥ 


ವಿದ್ಯವೀವಗೆ ಬುದ್ಧಿ ಕೊಡುವಗೆ 

ಸಿದ್ಧಿ ದಾಯಕ ಗಣಪಗೇ 

ಶುದ್ಧ ಮನದಲಿ ಶರಣು ಹೊದ್ದಲು 

ಉದ್ಧರಿಪ ಸದ್ದಯನಿಗೇ॥ 2॥ 


ಇಕ್ಷುಚಾಪನ ಲಕ್ಷ್ಯ ಮಾಡದೆ 

ದಕ್ಷನಾಗಿಹ ಗಣಪಗೇ 

ಕುಕ್ಷಿಯೊಳು ಜಗವಿಟ್ಟು ರಕ್ಷಿಪ 

ಲಕ್ಷ್ಮೀಕಾಂತನ ಭಜಕಗೇ ॥3॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು