॥ ಶ್ರೀ ರಾಮ ಸ್ಮರಣಂ ॥
ಮರೆಯದೆಯೆ ಇರುವಂತೆ
ಮಾಡೋ ರಾಮನೆ ನಿನ್ನ ॥ಪ||
ದಶರಥನ ಮಗನಾಗಿ ಋಷಿಯ
ಯಜ್ಞವ ಕಾಯ್ದು ಪಶುಪತಿ
ಧನುವನು ಮುರಿದು, ಸೀತೆಯನು
ವಶವಮಾಡಿಕೊಂಡಾ ವೈಭವವನು ||೧||
ಜನಕನ ನುಡಿಯಂತೆ ವನವಾಸದಲಿ
ನಿಂದು ಜನಕ ಸುತೆಯ |
ಬಯಕೆಯ ತೀರಿಸಲು ಕನಕ ಮೃಗವ
ಸಂಹಾರವ ಗೈದುದ ||೨||
ಸೀತೆಯ ಹುಡುಕುತ್ತಾ ಪ್ರೀತಿಯಿಂ
ಗೃಧ್ವನಿಗೆ ಶ್ವೇತ ಕರ್ಮವನು
ಮಾಡಿ ವಾನರರ ವ್ರಾತದ
ಸೇನೆಯ ಕೂಡಿದುದಾ ||೩||
ಜಲಧಿಗೆ ಸೇತುವೆಯ ನಳನಿಂದ
ಕಟ್ಟಸಿ ಛಲದಿಂ ರಾವಣ ಕುಂಭಕರ್ಣರನು
ಸುಲಭವಾಗಿ ಸಂಹಾರವ ಗೈದುದ ||೪||
ಶರಣರಿಗೆ ಅಭಯದ ವರವಿತ್ತು
ಸಾಕೇತ ಪುರದ ಸಿಂಹಾಸನದೊಳು
ಮಂಡಿಸುತ ಧರೆಯೊಳು
ಮೆರೆಯುವ ಸಿದ್ಧಿವಿಲಾಸ ||೫||
0 ಕಾಮೆಂಟ್‌ಗಳು