|| ಗುರು ಸ್ತುತಿ ||
kannadabhajanlyrics.com |
ಗುರುರಾಜ ಎನ್ನಯ ಮರವೆಯ ಪೊರವೆಯ
ತೆರೆದು ತೋರಿಸೋ ನಿನ್ನ ಚರಣಾವನೀಗ ||ಪಲ್ಲವಿ||
ಮುಸುಕಿನೊಳಗೆ ಸಿಲುಕಿ ದೆಸೆ ದೆಸೆಗಳ ತಿರುಗಿ |
ಬಸವಳಿದಿರುವೆನು ಅಸಮಾನ ಮಹಿಮಾ ||೧||
ದಾರಿಯ ಕಾಣದೆ ಬಾಯಾರಿರುವೆನು ।
ಧೂರಿ ಕರುಣದಿಂದ ಪಾರುಮಾಡೆನ್ನ ||೨||
ಹುಡುಕಿ ಹುಡುಕಿ ನಾ ಪೊಡವಿಯೊಳೆಲ್ಲಾ | ಹಿಡಿಯುತಲಿರುವೆನು ಕೆಡುವ ವಿಷಯಗಳ ||೩||
ಮಡದಿ ಮಕ್ಕಳನೆ ಬಿಡದೆ ನಂಬಿ ನಾನು |
ನಡು ನೀರಿನೊಳು ಬಾಯ್ ಬಿಡುತಲಿರುವೆನು ||೪||
ಶರಣಜನರ ಭಯ ಹರಣ ದಕ್ಷನು ನೀನು ।
ತ್ವರಿತದಿಂ ಚಿದ್ರೂಪದಿರವನು ತೋರಿಸೋ ||೫||
0 ಕಾಮೆಂಟ್‌ಗಳು