ಓಡುತ ಬಾರೋ ನಲಿಯುತ ಬಾರೋ ದೇವ ಮಾರುತಿ - Odutha Baro Naliyutha Baro Deva Maruti

 ||ಹನುಮಸ್ತುತಿ ||

ಸದ್ಗುರು ಬಿಂದು ಮಾಧವರ ಕೃತಿ 

ತಾಳ :ಆದಿ

ರಾಗ : ಉದಯರವಿಚಂದ್ರಿಕೆ 

kannadabhajanlyrics.com
kannadabhajanlyrics.com


॥ ಓಡುತ ಬಾರೋ|ನಲಿಯುತ ಬಾರೋ ।

ದೇವ ಮಾರುತಿ|| ಆಡಿ ಪಾಡಿ|ಬೇಡುವೆ ನಿನ್ನ| 

 ದಿವ್ಯ ಮಾರುತಿ॥ ॥ ಮಾರುತಿ ||

 ನಿನ್ನಯ ಸೇವೆಯ ಮಾಡುತಲಿರುವೆ ನೀಡು ಶುಭಮತಿ||

ಎಮಗೆ ನೀಡು ||


ಬಡತನವಾಗಲಿ|ಸಿರಿತನವಾಗಲಿ|ನಿನ್ನ ಮರೆಯದೇ||

ಕಿರಿತನವಿರಲಿ|ಹಿರಿತನವಿರಲಿ|ಧ್ಯಾನ ತೊರೆಯದೇ||

ಮೋಹವ ಮರೆವ|ನಿನ್ನನು ಅರಿವಾ|ಮತಿಯ ಕರುಣಿಸು॥

ಹನುಮಾ । ಮತಿಯ ಕರುಣಿಸು||ಓಡುತ ಬಾರೋ||


ಗಂಧದ ಕಡ್ಡಿ ಉರಿಯಲು ತಾನು|ಧೂಪ ಕೊಡುವುದು।

ಎಣ್ಣೆಯ ಬತ್ತಿ ಉರಿಯುತ ತಾನು|ಜ್ಯೋತಿ ಎನಿಪುದು॥

ಅಂತಹ ನಿರ್ಮಲ ಸೇವೆಯ ಗೈವಾ|ಮತಿಯ ಕರುಣಿಸು॥

ಹನುಮಾ|ಮತಿಯ ಕರುಣಿಸು||ಓಡುತ ಬಾರೋ ॥ 


ಸೂತ್ರದ ಗೊಂದೆ ನಾನಾಗಿಹೆನು|ರಾಮದಾಸನೇ ॥

ಸೂತ್ರವ ಪಿಡಿದು|ಆಡಿಸುತಿರುವೆ|ಎನ್ನ ದೇವನೇ ॥

ನೀ ಕೈ ಬಿಡದಿರು ಬೆಲಗೂರ ಹನುಮ|ಕೋಟಿ ವಂದನೆ||

ನಿನಗೆ ಕೋಟಿ ವಂದನೆ ॥ ಓಡುತ ಬಾರೋ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು