ತಿಂಗಳು ಮುಳುಗಿದವೋ ಒಳ್ಳೆ ರಂಗೋಲಿ ಬೆಳಗಿದವೋ - Thingalu Mulugidavo Olle Rangoli Belagidavo

 ||ಅಯ್ಯಪ್ಪ ಸ್ವಾಮಿ ಸ್ತುತಿ ||

ರಾಗ : ಚಾಂದ್‌

ತಾಳ : ಆದಿ 



॥ತಿಂಗಳು ಮುಳುಗಿದವೋ । 

ಒಳ್ಳೆ ರಂಗೋಲಿ ಬೆಳಗಿದವೋ ॥ 

ಸ್ವಾಮಿ ಅಯ್ಯಪ್ಪನ ಪೂಜೆಗಾಗಿ । 

ಬಾಳೆ ಬಾಗಿದವೋ ॥ ತಿಂಗಳು ||


॥ ಕಾರ್ತಿಕ ಮಾಸದಲಿ ಮಾಲೆಯನು ಧರಿಸಿ । 

ಸ್ವಾಮಿ ಅಯ್ಯಪ್ಪನಾ ಕಾಣಲೆಂದು 

ಸಾಲು ಸಾಗಿದವೋ ॥  ೧.


ಇರುಮುಡಿಯನ್ನು ಹೊತ್ತು । ಎರಿಮಲೆಯನ್ನು ಹತ್ತಿ 

ಸ್ವಾಮಿ ಅಯ್ಯಪ್ಪನ ಕಾಣಲೆಂದು । 

ಸಾಲು ಸಾಗಿದವೋ ॥ತಿಂಗಳು ॥  ೨.


೩. ಅಳುದಾ ಸ್ನಾನವ ಮಾಡಿ । ಅಳುವಾ ಬೆಟ್ಟವ ಹತ್ತಿ॥ 

ಸ್ವಾಮಿ ಅಯ್ಯಪ್ಪನಾ ಕಾಣಲೆಂದು । 

ಸಾಲು ಸಾಗಿದವೋ ॥ತಿಂಗಳು ॥ ೩.

 

|| ಕರಿಗಿರಿ ಬೆಟ್ಟದಲ್ಲಿ । ಕಲ್ಲುಮುಳ್ಳು ತುಳಿದು ॥ 

ಸ್ವಾಮಿ ಅಯ್ಯಪ್ಪನ ಕಾಣಲೆಂದು । 

ಸಾಲು ಸಾಗಿದವೋ ||ತಿಂಗಳು || ೪.


॥ ಪಂಪಾನದಿಯ ಸ್ನಾನ ॥ ಪವಿತ್ರವಾದ ಸ್ನಾನ ॥ 

ಕನ್ನಿಮೂಲ ಗಣಪನ । ದರ್ಶನವ ಮಾಡಿ । 

ಬಾಳು ಬೆಳಗಿದವೋ ||ತಿಂಗಳು ॥  ೫.


||ಸ್ವಾಮಿಯ ಸನ್ನಿಧಾನ । ಸ್ವರ್ಗಕ್ಕೆ ಸಮಾನಾ ॥ 

ಸ್ವಾಮಿ ಅಯ್ಯಪ್ಪನ ದರ್ಶನ ಮಾಡಿ । 

ಬಾಳು ಬೆಳಗಿದವೋ ||ತಿಂಗಳು ॥  ೬.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು