ರಾಮ ನಾಮವನು ಸಾರಿಹೇಳುವ ವೀರಹನುಮನ ನೆನೆ ನೆನೆ Ramanamavanu Sari Heluva

||ಹನುಮ ಸ್ತುತಿ ||

||ಸದ್ಗುರು ಬಿಂದುಮಾಧವ ವಿರಚಿತ ||

ರಾಗ : ಮಿಕ್ಸ್

ತಾಳ : ಆದಿ



kannadabhajanlyrics.com
kannadabhajanlyrics.com


॥ ರಾಮನಾಮವನು|ಸಾರಿಹೇಳುವ|

ವೀರಹನುಮನ ನೆನೆ ನೆನೆ ||

ಬೆಲಗೂರು ಗ್ರಾಮದಿ ವಾಸವಾಗಿರುವ ।

ವೀರಪ್ರಶಾಪನ | ನೆನೆ ನೆನೆ ॥ ಪ.


ಅಭಯವ ಕೋರುತ ನಿಂತಿರುವಂತ ।

ಕರಿಶಿಲೆ ಹನುಮನ ನೆನೆ ನೆನೆ ॥

ರೋಗ ರುಜಿನವ । ನಾಶಮಾಡುವಂಥ ।

ಭವರೋಗ ವೈದ್ಯನ ಸೆನೆ ನೆನೆ||ರಾಮಾ|| ೧.


॥ಕರದಲಿ ಗದೆಯ । ಹಣೆಯಲಿ ನಾಮವ ।

ಧರಿಸಿದ ಹನುಮನ ನೆನೆ ನೆನೆ ॥

ನಗುಮೊಗದಿಂದ । ಭಕ್ತರ ಪೊರೆಯುವ ।

ಮುದ್ದು ಹನುಮನ ನೆನೆ ನೆನೆ||ರಾಮಾ|| ೨.

 

॥ ಭಕ್ತರ ಕೋರಿಕೆ ಆಲಿಸಿ ಸಲಹುವ ।

ದೇವರ ಜೇವನ ನೆನೆ ನೆನೆ ॥

ಕರೆದು ವರಗಳ । ಕೊಡುವನಮ್ಮ।

ಬೆಲಗೂರು ಹನುಮನ ನೆನೆ ನೆನೆ||ರಾಮ॥ ೩. 


ಅಂಜನಿ ಗರ್ಭದೊಳ್‌ । ಉದಿಸಿರುವಂಥ ।

ವಾನರ ಶ್ರೇಷ್ಟನ ನೆನೆ ನೆನೆ ॥

ರಾಮಚಂದ್ರನೇ । ಮಾಸವಾಗಿರುವ ।

ಮಾರುತಿರಾಯನ ನೆನೆ ನೆನೆ||ರಾಮ|| ೪.


ಭೂತ ಪ್ರೇತಗಳ । ಬಿಡಿಸಿರುವಂಥ ।

ವಾಯುಕುಮಾರನ ನೆನೆ ನೆನೆ ||

ರಾಮನಾಮದಲಿ । ಲೀನವಾಗಿರುವ ।

ಮಾರುತಿರೂಪನ ನೆನೆ ನೆನೆ ॥ ರಾಮ॥ ೫.


ಭಕ್ತರ ಬಂಧು । ಬಿಂಧುಮಾಧವರ ।

ಮುಕ್ತಪಾದವಾ ನೆನೆ ನೆನೆ ॥

ಅಪಾರ ಮಹಿಮೆಯ ಬೆಲಗೂರ್‌ ಹನುಮನ ।

ದಿವ್ಯಚರಣವ ನೆನೆ ನೆನೆ ||ರಾಮ|| ೬.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು