||ಜಾನಪದ ಗೀತೆ ಗಣಪತಿ ಸ್ತುತಿ||
ಶರಣು ಶರಣುವಯ್ಯ ಗಣನಾಯ್ಕ ।
ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ।
ಎಳ್ಳುಂಡೆ ಜೇನುತುಪ್ಪ ಗಣನಾಯ್ಕ ।
ನಮಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ ।| ಪ ||
ಉದ್ದು ಹೋಳಿಗೆ ತುಪ್ಪ ಗಣನಾಯ್ಕ ।
ನಿಮ್ಗೆ ತಪ್ಪಾದೆ ಒಪ್ಪಿಸುವೆ ಗಣನಾಯ್ಕ ||
ಗೋನೆ ಮ್ಯಾಗಳ ಬಾಳೆಹಣ್ಣು ಗಣನಾಯ್ಕ |
ನಿಮ್ಗೆ ಕಳಿ ಅಡಕೆ ಚಿಗುರೆಲೆ ಗಣನಾಯ್ಕ ||
ಕೊಂಬೆ ಮ್ಯಾಗಳ ನಿಂಬೆಹಣ್ಣು ಗಣನಾಯ್ಕ।
ನಿಮ್ಗೆ ಒಡಗಾಯಿ ಇಡಗಾಯಿ ಗಣನಾಯ್ಕ ॥।
ಕರ್ಪೂರ ಸಾಂಬ್ರಾಣಿ ಗಣನಾಯ್ಕ |
ನಿಮ್ಮೆ ಮರುಗ ಮಲ್ಲಿಗೆ ಜಾಜಿ ಗಣನಾಯ್ಕ ॥।
ಹಸುರಂಗಿ ಕಾಲ್ಕಡಗ ಗಣನಾಯ್ಕ।
ನಿಮ್ಗೆ ಕುಶಲದ ಮೇಲ್ಕಟ್ಟು ಗಣನಾಯ್ಕ ||
ಮೂಷಿಕ ವಾಹನ ಗಣನಾಯ್ಕ ।
ನಮ್ಮ ಶಿವನ ಕುಮಾರನಯ್ಯ ಗಣನಾಯ್ಕ ||
ನಿಂಗೆ ಹೆಂಡ್ರಿಲ್ಲ ಮಕ್ಕಳಿಲ್ಲ ಗಣನಾಯ್ಕ |
ನೀ ಎದ್ದು ಬಾರಯ್ಯ ಸಿದ್ಧಿ ಗಣನಾಯ್ಕ ||
ಬಿಲ್ಬತ್ರೆ ವನದಲ್ಲಿ ಗಣನಾಯ್ಕ।
ನಮ್ಮ ಧ್ಯಾನಕ್ಕೆ ಒಲಿಯಯ್ಯ ಗಣನಾಯ್ಕ ||
ಕಂಟಕ ಹರ ನೀನು ಗಣನಾಯ್ಕ।
ನಮ್ಗೆ ವರವನು ಪಾಲಿಸಯ್ಯ ಗಣನಾಯ್ಕ ||
0 ಕಾಮೆಂಟ್‌ಗಳು