ವೇದವ ತಂದಗೆ ಧರಣಿಯ ಪೊತ್ತಗೆ - Vedava Thandage Dharaniya Pottage

|| ಮಂಗಳ ಸ್ತುತಿ ||


ವೇದವ ತಂದಗೆ ಧರಣಿಯ ಪೊತ್ತಗೆ 

ಆದಿವರಾಹ ನರಸಿಂಹನಿಗೆ

ಮೇದಿನಿಯೊಳ್‌ ಭಾರ್ಗವ ರಘುಪತಿ

ಕೃಷ್ಣ ಮಾಧವ ಬೌದ್ಧ ಕಲ್ಕ್ಯನಿಗೆ ... 

ಜಯ ಮಂಗಳಂ   ||೧||


ಜಯ ಮಂಗಳಂ ಶ್ರೀ ರಾಮಚಂದನಿಗೆ ।

ಜಯ ಮಂಗಳಂ ಜಾನಕಿ ರಮಣಿಗೆ ।

ಜಯ ಮಂಗಳಂ ಶ್ರೀ ರಾಮಚಂದನಿಗೆ । 

ದಶರಥ ಸುತನಿಗೆ ದೈತ್ಯ ಸಂಹಾರಗೆ

ಪಶುಪತಿ ಸಖ ಸೀತಾಪತಿಗೆ

ಎಸೆವ ಪಾದದಿ ಅಹಲ್ಯೆಯನುದ್ಧರಿಸಿದ

ದಶಮುಖ ಭಂಜನ ರಾಮನಿಗೆ

ಜಯ ಮಂಗಳಂ ||೨||


ಧರೆಯೊಳಧಿಕ ಶೇಷಾಚಲ ಸನ್ನಿವಾಸಗೆ

ಶರಣು ಜನರನು ಉದ್ಧರಿಪನಿಗೆ ವರವಿತ್ತು

ಭಕ್ತರ ಸಲಹುವ ದೇವಗೆ

ವರದ ರಮಾಪತಿ ವೆಂಕಟೇಶನಿಗೆ..

ಜಯ ಮಂಗಳಂ ||೩|| 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು