ಚಂದ್ರಶೇಖರ ಪಾಹಿ ಗುರೋ - Chandrashekhara Pahi Guro

॥ ಶ್ರೀ ಚಂದ್ರಶೇಖರ ಪಾಹಿ ಗುರೋ ॥ 



ಚಂದ್ರಶೇಖರ ಪಾಹಿ ಗುರೋ ।

ಸಾಂದ್ರ ಗುಣಾಲಯ ತ್ರಾಹಿ ಗುರೋ ॥ ಪ 


ಶೃಂಗ ಶೈಲ ಪುರವಾಸ ಗುರೋ,

ತುಂಗಾತೀರ ವಿಹಾರಿ ಗುರೋ |

ಶಂಕರಮತ ಪರಿಪಾಲ ಗುರೋ,

ಕಿಂಕರ ಪಾಲಿತ ಮಹಿಮ ಗುರೋ ||


ದಂಡ ಕಮಂಡಲಧಾರಿ ಗುರೋ,

ಅಂಡಪಿಂಡ ಬ್ರಹ್ಮಾಂಡ ಗುರೋ ।

ಕಾಷಾಯಾಂಬರ ಭೂಷ ಗುರೋ,

ವೇಷಾಡಂಬರ ರಹಿತ ಗುರೋ ॥ 


ದಕ್ಷಿಣ ಪೀಠಾಧೀಶ ಗುರೋ,

ಸಾಕ್ಷಾತ್‌ ಪರಶಿವಮೂರ್ತಿ ಗುರೋ |

ನಾರಸಿಂಹ ಕರಜಾತ ಗುರೋ,

ಭಾರತೀಶ ಶುಭನಾಮ ಗುರೋ ॥ 


ಗೀರ್ವಾಣೀ ವರ ಭಕ್ತ ಗುರೋ,

ಪಾರಮಾರ್ಥ ವರ ತತ್ತ್ವ ಗುರೋ ।

ಪೂಜಿತ ವರ ಶ್ರೀಚಕ್ರ ಗುರೋ,

ರಾಜಮಾನ್ಯ ಯತಿರಾಜ ಗುರೋ ॥ 


ವಿದ್ಯಾದಾಯಕ ಪೂಜ್ಯ ಗುರೋ,

ಶುದ್ಧಾದ್ವೈತ ಪ್ರಚೋದ್ಯ ಗುರೋ |

ಸತ್ಯ ಧರ್ಮ ಪರಿಪಾಲ ಗುರೋ,

ನಿತ್ಯ ಕರ್ಮ ಸಂತುಷ್ಠ ಗುರೋ ॥


ಭಕ್ತಾಭೀಷ್ಟದ ಪರಮ ಗುರೋ,

ರಕ್ತ ನಳಿನ ದಳ ನೇತ್ರ ಗುರೋ ।

ಜ್ಞಾನಮಾರ್ಗ ಸಿದ್ಧಾಂತ ಗುರೋ,

ಧ್ಯಾನಿತ ಜನ ಪರಿಪೋಷ ಗುರೋ ॥ 


ಜನ್ಮದುಃಖ ಭವನಾಶ ಗುರೋ,

ಚಿನ್ಮಯ ರೂಪ ಪ್ರಶಾಂತ ಗುರೋ ।

ಕಾರುಣ್ಯಾಂಬುಧಿ ಚಂದ್ರ ಗುರೋ,

ಘೋರ ದುರಿತ ಹರಣೈಕ ಗುರೋ ॥ 


ಹರಿಹರ ಬ್ರಹ್ಮ ಸ್ವರೂಪ ಗುರೋ, 

ಪರಮ ಹಂಸ ಪರಮಾತ್ಮ ಗುರೋ । 

ಪ್ರಕಟಿತಲೀಲಾ ಮಹಿಮ ಗುರೋ, 

ಸುಖಕರ ಮುಕ್ತಿಪ್ರದಾತ ಗುರೋ ॥ 


ಅಖಂಡ ವೈಭವ ಯುಕ್ತ ಗುರೋ, 

ಸಕಲ ಜಗತ್ಕಲ್ಯಾಣ ಗುರೋ । 

ನಿಗಮಾಗಮ ಸಂಪೂಜ್ಯ ಗುರೋ, 

ಜಗದ್ವಂದ್ಯ ಜಗದೀಶ ಗುರೋ ||


ಶ್ರೀಧರದಾಸ ಹೃದಾಬ್ಜ ಗುರೋ, 

ಶುದ್ಧಾನಂದ ವಿಕಾಸ ಗುರೋ |। 

ಜಯ ಜಯ ಮಂಗಳ ಶುಭದ ಗುರೋ, 

ಜಯ ಶುಭ ಮಂಗಳ ಶುಭದ ಗುರೋ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು