|| ಶ್ರೀ ಗಣೇಶ ಶ್ರೀಸುಬ್ರಹ್ಮಣ್ಯ ಸ್ತುತಿ | |
ಶ್ರೀ ಗಣೇಶ ಸುಪ್ರಸನ್ನ ದೇವ ವಂದಿತ ।
ಶ್ರೀ ಸುರೇಶ ಸುಬ್ರಹ್ಮಣ್ಯ ಅಮರ ಪಾಲಿತ ॥೧||
ದಂತವಕ್ರ ಶೂರ್ಪಕರ್ಣ ದಂತವಕ್ರ ಓಂ |
ಶಕ್ರಪಾಲ ದೇವ ದೇವ ಸರ್ಪರೂಪ ಓಂ ||೨||
ಆದಿಮೂಲ ದೇವರೂಪ ಶ್ರೀ ವಿನಾಯಕ ।
ಆದಿಶೇಷ ನಾದಪ್ರಿಯ ಪಾಹಿ ಷಣ್ಮುಖ ॥೩||
ಆನೆವದನ ದೇವ ಸದನ ಸ್ವಾಮಿ ಲಂಬಶ್ರೀ |
ಭೂವಿಭರಣ ಜ್ಞಾನಸದನ ಸ್ವಾಮಿ ಸ್ಕಂದಶ್ರೀ ॥೪||
ಹೇರಂಬ ಗಣಪ ಏಕದಂತ ಶುಂಡವಾಹನ ।
ಪನ್ನಂಗ ದೇವ ಹಂಸವಾಹನ ಕ್ರೌಂಚಧಾರಣ ॥೫||
ಶುಭ್ರದೇಹ ಅಗ್ರಪೂಜ್ಯ ಶ್ರೀ ವಿನಾಯಕ |
ಉಗ್ರಭಾವ ಸುಬ್ರಹ್ಮಣ್ಯ ದೇವ ಆರ್ಮುಖ ॥೬||
ಪ್ರಥಮ ಪೂಜ್ಯ ಪ್ರಥಮ ಸೇವ್ಯ ಶ್ರೀ ಗಜಾನನ ।
ಪ್ರಥಮ ರೂಪ ಪೃಥ್ವಿ ಸೇವ್ಯ ಶ್ರೀಷಡಾನನ ॥೭||
ಆರಗಂ ಶಂಕರಾರ್ಯ ಜೀವ ಸುಕೃತ |
ರಾಗದಿಂ ಭಜಿಪ ಗಾನ ತಾನೆ ಸ್ವಯಂಕೃತ ||೮||
ಮಂಗಳಂ ಭವತು ಶ್ರೀ ಜಯವಿನಾಯಕ |
ಮಂಗಳಂ ಭವತುಶ್ರೀ ಪಾಹಿ ಷಣ್ಮುಖ ||೯||
0 ಕಾಮೆಂಟ್‌ಗಳು