ರಾಘವೇಂದ್ರ ಸ್ತುತಿ - ಮನ ಮಂದಿರದೊಳು ನೆಲೆಸೋ ಬಂದು, Mana Mandiradolu Neleso Bandu

|| ರಾಘವೇಂದ್ರ ಸ್ತುತಿ ||



ಮನ ಮಂದಿರದೊಳು ನೆಲೆಸೋ ಬಂದು|

 ರಾಘವೇಂದ್ರ ಗುರು ದಯ ಮಾಡಿಂದೂ....||ಪಲ್ಲವಿ||


ನಗೆ ನೋವಿನ ಆ...ಗರ ವೀ....ಮನವು |

ಭವ ಬಂಧನದೀ..... ಕಾ..... ಣದ ತಿಳಿವು ||

ಗುರುಪದ ಸೇವೆಯು ನೀಡಲಿ ಅರಿವು |

ನಿನ್ನಯ ಕೃಪೆ ಎನಗೆ ಇಹ ಪರವು  ||೧||


 ವರ ಮಂತ್ರಾಲಯ ಪಾ.....ವನ ನಿಲಯ |

 ಕರುಣಾ ಹೃದಯವೇ  ನೀ.....ಡುವ ಅಭಯ ||

 ಮನದಲ್ಲಿ ಮುಸುಕಿದ ಈ ಕತ್ತಲೆಯ |

 ನೀಗಿಸಿ ಬೆಳಕನು ನೀ... ನೀಡು ಜೀಯಾ ||೨||


 ಬೃಂದಾವನವೇ ತವ ಸ್ಥಿರ  ವಾಸವು |

 ವೇಣು ವಿಹಾರಿಯ ಧ್ಯಾನದಿ ನಿರತವು ||

 ದೀನರ ಪಾಲಿಪ ಧೀಮಂತ ಗುಣವು |

 ಗುರು ಸುಯತೀಂದ್ರರ ಕೃಪೆ ಸಾಧನವು ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು