ಗಣಪತಿ ಸ್ತುತಿ - ನಮೋ ನಮೋ ಪ್ರಮಥಾಧಿಪತೇ, Namo Namo Pramathadhipathe

|| ಗಣಪತಿ ಸ್ತುತಿ ||

ರಾಗ : ಕಾನಡ 
ತಾಳ : ಆದಿ 



ನಮೋ ನಮೋ ಪ್ರಮಥಾಧಿಪತೇ।

ನಮೋ ನಮೋ ಸಿದ್ಧಿ ಗಣಪತೇ॥ ಪ


ನಮೋ ನಮೋ ವಿಘ್ನಾಧಿಪತೇ। 

ನಮೋ ನಮೋ ಸಿದ್ದಿ ಬುದ್ಧಿಪತೇ।| ಅ. ಪ.


ಮೋದಕ ಹಸ್ತ ಗಜವದನ |

ಮೋದದಾಯಕ ಭವಹರಣ।

ಆದಿಪೂಜಿತ ಸಿದ್ಧಿ ಸದನ |

ಸಾಧು ಸೇವಿತ ಗಜಾನನ ॥ ೧ ||


ಪಾಶಾಂಕುಶಧರ ದೇವೇಶ |

ಶೇಷಭೂಷಣನುತ ವಿಘ್ನೇಶ |

ಭಾಸುರ ನಿಭಾಂಗ ಸರ್ವೇಶ |

ದಾಸರ ಪೊರೆಯೊ ಜಗದೀಶ || ೨ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು