|| ಆರತಿ ಹಾಡು ||
ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ
ವೇಂಕಟರಮಣನಿಗಾರುತಿ ಎತ್ತೀರೇ...... |
ಮತ್ಸ್ಯವತಾರಗೆ ಮಂದರೋದ್ಧಾರಗೆ
ಅಚ್ಚರಿಯಿಂದ ಭೂಮಿಯ ತಂದವಗೇ.....|
ಪೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ
ನರಸಿಂಹನಿಗಾರುತಿ ಎತ್ತೀರೇ...||
ವಾಮನ ರೂಪಿಲಿ ದಾನವ ಬೇಡಿ
ಪ್ರೇಮದಿ ಕೊಡಲಿಯ ಪಿಡಿದವಗೇ... |
ರಾಮಚಂದ್ರನಾಗಿ ದಶಶಿರನಾ ಕೊಂದ
ಶ್ರೀ ಕೃಷ್ಣನಿಗಾರುತಿ ಎತ್ತೀರೇ....||
ಬತ್ತಲೆ ನಿಂತ ಬೌದ್ಧವತಾರಗೆ
ಉತ್ತಮ ಹಯವನ್ನೇರಿದಗೇ ।
ಭಕ್ತರ ಸಲಹುವ ಪುರಂದರವಿಠಲಗೆ
ಮುತ್ತೈದೆಯರಾರುತಿ ಎತ್ತೀರೇ...||
0 ಕಾಮೆಂಟ್‌ಗಳು