|| ಶಾರದಾ ಸ್ತುತಿ ||
ರಾಗ : ಯಮನ್ಕಲ್ಯಾಣ್
ತಾಳ : ಆದಿ
ವಿದ್ಯಾದೇವಿ ಸರಸ್ವತಿಯೇ
ವಿದ್ಯಾರ್ಥಿಗೆ ನೀನೇ ಗತಿಯೇ |
ಸದ್ಬುದ್ಧಿಯ ನೀಯುತೆ ಜವದೀ
ಸದ್ವಿದ್ಯೆಯ ಕೊಡು ಕಡುಮುದದಿ ||
ಭಾರತಿ ನಿಜಭಾರತಿಯ ಕೊಡೆ
ಭಾರತ ಭಕ್ತರ ಕಾಪಾಡೆ |
ವಾಣಿಯೇ ಪ್ರಾರ್ಥಿಸುವೆನು ಬಾರೆ
ವಾಣಿ ಅಧಿಷ್ಠಾನವ ತೋರೆ ||
ಪೂರೆಯನುಭವವಂ ವೈಖರಿಯಂ
ಅರುಹುವೆ ನಾ ನಿನ್ನಯಕೃಪೆಯಿಮ್ |
ಕರುಣದಿ ಕಾಯೆ ಸರಸ್ವತಿಯೇ
ಪರಮ ಶಿವಾನಂದವ ನೀಯೆ ||
0 ಕಾಮೆಂಟ್‌ಗಳು