ದೇವರು ಬಂದದ್ದು - ಗರುಡ ಗಮನ ಬಂದನೋ ನೋಡಿರೋ, Garuda Gamana Bandano Nodiro

|| ದೇವರು ಬಂದದ್ದು ||




ಗರುಡ ಗಮನ ಬಂದನೋ ನೋಡಿರೋ

ಬೇಗ ಗರುಡ ಗಮನ ಬಂದನೋ ||ಪ॥

ಗರುಡ ಗಮನ ಬಂದ ಧರಣಿಯಿಂದೊಪ್ಪುತ 

ಕರೆದು ಬಾರೆನ್ನುತ ವರಗಳ ಬೀರುತ ||ಅ.ಪ.||


ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ |

ಚಿನ್ನವ ಪೋಲುವ ವಿಹಂಗದ ರಥದಲ್ಲಿ |

ಘನ್ನ ಮಹಿಮ ಬಂದ ಅಬಿನ್ನ ಮೂರುತಿ ಬಂದ

ಸಣ್ಣ ಕೃಷ್ಣ ಬಂದಾ ಬೆಣ್ಣ ಕಳ್ಳ ಬಂದ ॥೧॥


ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ ।

ಕುಕ್ಸಿಯೊಳಗೆಜಗವ ಇಟ್ಟವತಾಬಂದ ॥

ಸೂಕ್ಷ್ಮ ಸ್ಥೂಲದೊಳು ಇಪ್ಪನು ತಾ ಬಂದ ।

ಸಾಕ್ಷಿಭೂತ ಅವ ಸರ್ವೇಶ್ವರ ಬಂದ ||೨||


ತಂದೆ ಪುರಂದರವಿಠಲ ರಾಯಬಂದ |

ಬಂದು ನಿಂದು ನಲಿದಾಡಿದನೊ ।

ಸಿಂಧುಶಯನ ಬಂದ ಅಂದು ಸಾಂದೀಪನ |

ನಂದನ ತಂದಿತ್ತ ಆನಂದ ಮೂರುತಿಬಂದ ॥೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು