|| ಪಾಂಡುರಂಗನ ಹಾಡು ||
ಬಾರೋ ಬಾರೋ ಪಾಂಡುರಂಗ ನೀನೇ ಗತಿ
ತೋರೋ ತೋರೋ ನಿನ್ನ ಮುಖವ ರುಕ್ಮಿಣಿ ಪತಿ||ಪ||
ಬಾರೋ ನೀ ಬಾರೋ ನೀ ಬಾರೋ
ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |
ಮಂದರಗಿರಿದರ ಸಿಂಧುಶಯನ ಅಂದವಾಗಿರುವಿ||೧॥
ಬಾರೋ ನೀ ಬಾರೋ
ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ
ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ॥೨॥
ಬಾರೋ ನೀ ಬಾರೋ ನೀ ಬಾರೋ
ಭಕ್ತರನ್ನೆಲ್ಲಾ ಉದ್ದರಿಸುವ ನೀನೇ ದೊರೆ
ಭಕ್ತವತ್ಸಲ ನಾರಸಿಂಹ ವಿಠಲ ಹರೇ ||೩||
0 ಕಾಮೆಂಟ್‌ಗಳು