||ಲಾಲಿ ಹಾಡು ||
ರಾಗಃ ಕುರಂಜಿ
ತಾಳ : ಅಟ್ಟ
ಲಾಲಿ ಜೋ ಜೋ ಲಾಲಿ ಪಾರ್ವತೀಕಂದಾ |
ಲಾಲಿ ಜೋ ಜೋ ಲಾಲಿ | ಈಶ್ವರಾನಂದಾ || `:ಲಾಲೀ:
ಸ್ವರ್ಣಮಯ ತೊಟ್ಟಿಲಲಿ | ಪವಡಿಸೋ ದೇವಾ |
ತೂಗುವೆನು ಹೇರಂಬ | ಷಣ್ಮುಖಾನನುಜಾ ॥ `:ಲಾಲೀ:
ಹುಟ್ಟಿದೊಡನೆಯೆ ಸ್ವಾಮಿ | ಅದ್ಭುತಾನಾಗಿ
ತಂದೆಯೊಡನೆಯೆ ಮಲ್ಲ | ಯುದ್ಧವನು ಗೈದೆ | `:ಲಾಲೀ:
ಲಾಲಿ ಜೋ ಜೋ ಲಾಲಿ | ರಮಣೀಯ ತೇಜಾ |
ಲಾವಿ ಜೋ ಜೋ ಲಾಲಿ | ವಿಶ್ವ ವಿಘ್ನೇಶ ॥ `:ಲಾಲೀ:
ಲಾಲಿ ಜೋ ಜೋ ಲಾಲಿ | ಅಂಬಿಕಾಕಾಂತಾ |
ಲಾಲಿ ಜೋ ಜೋ ಲಾಲಿ | ರಜತ ಗಿರಿವಾಸಾ || `:ಲಾಲೀ:
ಲಾಲಿ ಜೋ ಜೋ ಲಾಲಿ | ರುದ್ರಾಕ್ಷಧಾರೀ |
ಲಾಲಿ ಜೋ ಜೋ ಲಾಲಿ | ವಿಷಕಂಠಧಾರೀ ॥ `:ಲಾಲೀ:
ಅದ್ಭುತಾರೂಪನಿಗೆ | ಬ್ರಹ್ಮಾಂಡವೆಂಬೋ |
ತೊಟ್ಟಿಲಲಿ ತೂಗುವ | ಶಕ್ತಿ ನಮಗಿಲ್ಲಾ || `:ಲಾಲೀ:
ತಂದೆಯನು ಮಕ್ಕಳು | ತೂಗುವುದು ಹೇಗೇ |
ತಾಯಿ ಗಿರಿಜೆಯು ನಿನ್ನ|ತೂಗುವಳು ಸ್ವಾಮೀ|| :ಲಾಲೀ:
ಲಾಲಿ ಜೋ ಜೋ ಲಾಲೀ | ಕನಕಮಣಿ ಧಾರೀ |
ಲಾಲಿ ಜೋ ಜೋ ಲಾಲಿ | ಕಲ್ಯ್ಯಾವತಾರೀ ॥ `:ಲಾಲೀ:
ಲಾಲಿ ಜೋ ಜೋ ಲಾಲಿ | ರುಕ್ಮಿಣೀ ರಮಣ |
ಲಾಲಿ ಜೋ ಜೋ ಲಾಲಿ | ವೈಖಂಠ ಪತಿಯೇ ॥ `:ಲಾಲೀ:
ಹದಿನಾರು ಸಾವಿರ | ಗೋಪಿಕಾಲೋಲಾ |
ಕಪಟನಾಟಕ ಸೂತ್ರ | ಧಾರಿ ಲಕ್ಷ್ಮೀಶಾ || :ಲಾಲೀ:
ಕನಕರತ್ನ ಪೀಠದಲಿ | ಸುಂದರಾನಾಗೀ |
ಅಂಕದಲಿ ಕಾಂತೆಯನು | ಧರಿಸಿರುವೆ ಸ್ವಾಮೀ || :ಲಾಲೀ
ಲಾಲಿ ಜೋ ಜೋ ಲಾಲಿ | ಸ್ವರ್ಣಾಂಬೆತಾಯೇ |
ಲಾಲಿ ಜೋ ಜೋ ಲಾಲಿ । ಸುಜ್ಜಾನದಾಯೇ ॥ :ಲಾಲೀ
ಲಾಲಿ ಜೋ ಜೋ ಲಾಲಿ | ಶ್ರೀಕಂಠದಯಿತೇ |
ಲಾಲಿ ಜೋ ಜೋ ಲಾಲಿ | ಪರಮ ಕಲ್ಯಾಣೀ ॥ :ಲಾಲೀ
ನೀನೆ ನಮ್ಮೆಲ್ಲರಿಗು ತಾಯಿ | ಯಾಗಿರುವೇ |
ನಮ್ಮನೆಲ್ಲಾ ಸಲಹಿ | ತೊಟ್ಟಿಲಲಿ ತೂಗೊ ॥ :ಲಾಲೀ
ಬ್ರಹ್ಮಾಂಡವೆಲ್ಲವನು | ಧರಿಸಿರುವೆ ತಾಯೇ
ಪಶುರೂಪರಾಗಿರುವ | ನಮ್ಮಗಳ ಕಾಯೀ ॥ :ಲಾಲೀ
ಲಾಲಿ ಜೋ ಜೋ ಲಾಲೀ | ಕೋದಂಡ ಪಾಣೀ |
ಲಾಲಿ ಜೋ ಜೋ ಲಾಲಿ | ಕೌಸಲ್ಯ ತನಯಾ ॥ :ಲಾಲೀ
ಲಾಲಿ ಜೋ ಜೋ ಲಾಲಿ | ರಾಜಾಧಿರಾಜಾ |
ಲಾಲಿ ಜೋ ಜೋ ಲಾಲಿ | ಇಕ್ಷ್ವಾವಾಕು ತಿಲಕ || :ಲಾಲೀ
ಗಾಳಿ ಮಳೆಯೆನ್ನದೇ | ಕಾಡಿನಲಿ ಅಲಿದೇ |
ಸೌಮಿತ್ರಿ ಸಹಿತ ನೀ | ರಾಕ್ಷಸರ ಕೊಂದೇ ॥ :ಲಾಲೀ
ಪಿತೃವಾಕ್ಯ ಪಾಲನಾ | ಧೀರ ಶ್ರೀರಾಮ |
ಮಾರ್ಗದರ್ಶಕನಾದೆ | ಜನಕಿಜಾರಮಣ ॥:ಲಾಲೀ
ಲಾಲಿ ಜೋ ಜೋ ಕೌಲಿ | ಅಂಜನಾನಂದಾ |
ಲಾಲಿ ಜೋ ಜೋ ಲಾಲಿ | ಲೋಕಕಾನಂದಾ ॥ :ಲಾಲೀ
ಲಾಲಿ ಜೋ ಜೋ ಲಾಲಿ | ರಾಮನಾ ಭಂಟ |
ಲಾಲಿ ಜೋ ಜೋ ಲಾಲಿ | ಲೋಕದಲಿ ತುಂಟಾ ||:ಲಾಲೀ
ತಾಯಿನಿನ್ನನು ತೂಗಿ | ಮುದ್ದಿಸುವ ಮುನ್ನಾ |
ಅಂತರಿಕ್ಷವ ಮುಟ್ಟಿ | ಬಂದಿದೀಯಂತೇ ॥ :ಲಾಲೀ
ನಿನ್ನ ನೋಡಿದ ತಾಯಿ | ದಿಗ್ಭ್ರಾಂತಳಾಗೀ |
ಹರಸಿದಳು ಚಿರಂಜೀವಿ | ಯಾಗು ಮಗುವೆಂದು ॥ :ಲಾಲೀ
ಲಾಲಿ ಜೋ ಜೋ ಲಾಲಿ | ಲೋಕ ವಿಖ್ಯಾತ |
ಲಾಲಿ ಜೋಜೋ ಲಾಲಿ | ಲೋಕದಲಿ ಪೂಜ್ಯ ॥ :ಲಾಲೀ
ಲಾಲಿ ಜೋ ಜೋ ಲಾಲಿ | ಪರಮ ಪ್ರಚಂಡ |
ಲಾಲಿ ಜೋ ಜೋ ಲಾಲಿ | ಲಕ್ಷ್ಮಣಾನಂದಾ || :ಲಾಲೀ
ಆಜಾನುಬಾಹುವನು | ಮಲಗಿಸುವ ತೊಟ್ಲೂ |
ವಿಶ್ವದಲ್ಲಿಯೇ ಇಲ್ಲ | ತೂಗುವುದು ಹೇಗೇ ॥ :ಲಾಲೀ
ಹುಟ್ಟಿದೊಡನೆಯೇ | ನೀನು ಆಕಾಶಕೇರಿ ।
ತಾಯಿಗೇ ಕೀರ್ತಿಯನು | ತಂದೆಯೋ ಧೀರಾ || :ಲಾಲೀ
ಲಾಲಿ ಜೋ ಜೋ ಲಾಲಿ | ಅಪರಿಮಿತ ಶೂರ |
ಲಾಲಿ ಜೋ ಜೋ ಲಾಲಿ | ಮೂರ್ಲೋಕ ವೀರ ॥ :ಲಾಲೀ
ಲಾಲಿ ಜೋ ಜೋ ಲಾಲಿ | ಸುಜ್ಞಾನ ಮೂರ್ತೇ |
ಲಾಲಿ ಜೋ ಜೋ ಲಾಲಿ | ಅಜ್ಞಾನ ನಾಶಾ।|:ಲಾಲೀ
ಸುಗ್ರೀವನಾಸ್ಥಾನ | ಸಚಿವರೊಳು ನೀನೆ |
ಮುಖ್ಯ ನಾಗಿದ್ದೆಯೋ | ಸ್ವಾಮಿ ವೀರೇಶಾ ॥:ಲಾಲೀ
ಪೀಲಾ ಮಾತ್ರದಿ ನೀನು | ಶರಧಿಯನು ದಾಟೀ |
ಲಂಕೆಯಲಿ ಸೀತೆಯನು | ಹುಡುಕಿದೇ ಸ್ವಾಮೀ ॥:ಲಾಲೀ
ಲಾಲಿ ಜೋ ಜೋ ಲಾಲಿ! ಇಂದ್ರಿಯ ಸ್ತಂಭ |
ಲಾಲಿ ಜೋ ಜೋ ಲಾಲಿ | ಕೇಸರೀ ತನಯಾ ||:ಲಾಲೀ
ಲಾಲಿ ಜೋ ಜೋ ಲಾಲಿ | ಆಜಾನು ಬಾಹೂ |
ಉಪಲಿ ಜೋ ಜೋ ಲಾಲಿ | ಅಪರಿಮಿತ ಶೂರ ||:ಲಾಲೀ
ಲೋಔದಲಿ ನನಗಿಂತ | ಧೀರರಿಲ್ಲೆಂದೂ |
ಅಹಂಕಾರ ಪಡುತಿದ್ದ | ಭೀಮನಾ ಹಳಿದೇ॥:ಲಾಲೀ
ವಾಮ ಹಸ್ತದಿ ಸ್ವಾಮಿ | ಬೆಟ್ಟವನು ತಂದೇ |
ಲಕ್ಷ್ಮಣನ ಪ್ರಾಣವನು | ಉಳಿಸಿದೇ ಹರಿಯೇ ॥:ಲಾಲೀ
ಲಾಲಿ ಜೋ ಜೋ ಲಾಲಿ | ಈಶ್ವರಾ ಪುತ್ರ |
ಲಾಲಿ ಜೋ ಜೋ ಲಾಲಿ | ಶ್ರೀರಾಮ ಭಕ್ತಾ ॥:ಲಾಲೀ
ಲಾಲಿ ಜೋ ಜೋ ಲಾಲಿ | ವೀರ ಪ್ರತಾಪ |
ಲಾಲಿ ಜೋ ಜೋ ಲಾಲಿ | ಭಯಂಕಿರಾ ರೂಪಾ ||:ಲಾಲೀ
ಕಪಟನಾಟಕ ಸೂತ್ರ | ಧಾರಿಯಾ ಭಕ್ತಾ |
ಕಪಟಿಗಳ ನಾಶವಾ ಗೈದೆ | ಹನುಮಂತಾ ॥ :ಲಾಲೀ
ರಾಮ ನಾಮವನು | ಲೋಕಕ್ಕೆ ಸಾರಿ |
ರಾಮ ರಾಜ್ಯವ ನೀನು | ಸ್ಥಾಪಿಸಿದೆ ಸ್ವಾಮಿ ॥ :ಲಾಲೀ
ಲಾಲಿ ಜೋ ಜೋ ಲಾಲಿ | ಅಂಜನಾನಂದ |
ಲಾಲಿ ಜೋ ಜೋ ಲಾಲಿ | ಲೋಕಕಾನಂದ ||:ಲಾಲೀ
0 ಕಾಮೆಂಟ್‌ಗಳು