ಗುರು ಮಹಿಮಾ ಸ್ತುತಿ - ನೋಡಬಾರದೆ ಬ್ರಹ್ಮವ ನೋಡಬಾರದೇ, Nodabarade Brahmava Nodabarade

|| ಗುರು ಮಹಿಮಾ ಸ್ತುತಿ ||

kannadabhajanlyrics.blogspot.com
kannadabhajanlyrics.blogspot.com



ನೋಡಬಾರದೆ ಬ್ರಹ್ಮವ। ನೋಡಬಾರದೇ ॥ಪಲ್ಲವಿ॥ 

ಆಡುತ ಪಾಡುತ! ಬೇಡುತ ಕಾಡುತ।

ಓಡುತ ನೋಡುತ! ನಾಡೊಳು ಕೂಡಿದೇ ॥ಅ.ಪ.|| 


ನಿರುಪಮ ನಿರ್ಗುಣ। ನಿತ್ಯ ನಿರಾಶ್ರಯ।

ನಿರಘ ನಿರಂಜನ ನಿರವಧಿಯಾಗಿದೇ॥ ೧ ||


ನಶ್ವರ ಮಾಯೆಯ। ವಶ್ಯವಗೊಳಿಸಿ ಮ।

ಹೇಶ್ವರನೆನಿಸುತ ವಿಶ್ವವೆ ಯಾಗಿದೇ॥ ೨ ||


ತಾಪಕೆ ಸಿಲುಕದೆ! ವ್ಯಾಪಿಸಿ ಗುಣದೊಳು।

ಶ್ರೀಪತಿ ವಿಧಿಹರ ರೂಪವ ಧರಿಸಿದೇ॥ ೩ ||


ಮಲಿನದ ವಿದ್ಯೆಯ। ಕಲಿತು ಮರೆತು ತನ್ನ।

ತಿಳಿಯದೆ ತತ್ತ್ವವ ಕಳವಳಿಸುತಲಿದೇ ॥ ೪ ||



ಸೇರಿ ತಾಮಸಿಯೊಳು! ಧಾರಣಿ ಜಲಶಿಖ।

ಮಾರುತ ಗಗನಾಕಾರವ ಧರಿಸಿದೇ॥ ೫ ||


ಇಂದ್ರಾದ್ಯುತ್ತಮ। ಬಂಧುರ ತನುಗಳ ಹೊಂದಿ

ಮನುಜರಿಂದ ವಂದಿಸಿ ಕೊಳುತಿದೇ ॥ ೬ ||


ವಿಧ ವಿಧ ಮರ್ತ್ಯಾ | ಧ್ಯಧಮ ದೇಹವ ಸೇರಿ |

ಸದಮಳ ಪೂಜಾ। ವಿಧಿಯನು ಹಿಡಿದಿದೆ || ೭ ||


ನಿಜದೊಳಗಿಲ್ಲದ। ವೈಜನವ ಕಲ್ಪಿಸಿ |

ಅಜ ಹರಿ ರುದ್ರರ। ಭಜಿಸುತ ಕೂಡಿದೆ || ೮ ||


ದಾಸನೆನಿಸಿ ಸಂ। ನ್ಯಾಸಿ ಎನಿಸಿ ಪರ।

ದೇಶಿ ಎನಿಸುತೀ। ವೇಷವ ಧರಿಸಿದೇ॥ ೯ ||


ತಾತ ತರುಣಿ ತನು। ಜಾತ ಮಾತುಳರೆಂಬೀ

ಮಾತುಗಳಿಂ ವಿಪ ರೀತ ಭಾವದೊಳಿದೆ॥ ೧೦ ||


ಬೆರತು ಕರಣದೊಳ। ಗರಿಯದ ಮೂಢನ।

ಪರಿಯೊಳು ಸುಮ್ಮನೆ ಶರೀರದೊಳಡಗಿದೇ॥೧೧||


ವಿದ್ಯಾ ವಿದ್ಯೋ | ಪಾದಿಯ ಕಳದರೆ!

ಶುದ್ಧ ಚಿದಾನಂದಾದ್ವಯ ವೆನಿಸಿದೇ॥೧೨||


ಕುಂಭಿನಿ ಕೋಟಿಯೋಳಿಂಬಿಲ್ಲದೆ ತಾ |

ನಂಬರದಂದದಿ | ತುಂಬಿ ತುಳುಕುತ್ತಿದೇ॥೧೩||


ಗುರು ಶಂಕರನೊಳ್‌। ಬೆರೆಯದ ಮನುಜರಿ।

ಗರಿಯದ ಪರಿಯೊಳು ಮರೆಯೊಳು ಕೂಡಿದೇ।|೧೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು