ಗುರು ಮಹಿಮಾ ಸ್ತುತಿ - ತನ್ನ ತಿಳಿದೊಡವ ಯೋಗೀ, Thanna Tilidodava Yogi

|| ಗುರು ಮಹಿಮಾ ಸ್ತುತಿ ||



ತನ್ನ ತಿಳಿದೊಡವ ಯೋಗೀ। ತಾನೆ |

ತನ್ನ ಮೂಲವ ಕಾಣದವ ಜನ್ಮ ರೋಗಿ |

ಎಂದಿಗು ಜನ್ಮರೋಗಿ ॥ಪಲ್ಲವಿ॥ 


ಕರವಿದು ಕೊಡುವ ದಾನದಲೀ। ಮತ್ತೆ |

ಶಿರವಿದು ಶಿವನಿಗೊಂದಿಸುವ ಕಾಲದಲಿ। 

ಚರಣದ ತೀರ್ಥಯಾತ್ರೆಯಲೀ। ಬಾಯ।

ತೆರದು ಶಿವನ ಸುತ್ತಿಸುವ ಸಮಯದಲೀ॥ ೧ 


ನಾನಾ ಚಿತ್ರಗಳ ನೋಟದಲೀ। ಬಳಿಕೀ |

ವೀಣಾದಿ ಗಾನ ಧ್ವನಿಯ ಕೇಳುವಲ್ಲಿ |

ನಾನಾ ಗಂಧವ ಮೂಸುವಲ್ಲಿ ಒಳ್ಳೇ।

ಜೇನು ಸಕ್ಕರೆ ಭಕ್ಷಂಗಳ ರುಚಿಯಲ್ಲಿ ॥೨||


ಒಂದಾಗಿ ನಿಶ್ಚೈಸುವಲ್ಲಿ | ಕಂಡು।  

ತಿಂದು ಕೇಳಿದ ವಸ್ತುಗಳು ಬಯಸುವಲ್ಲಿ |

ಹಿಂದೆ ನಡೆದ ಸ್ಮೃತಿಯಲ್ಲಿ ತನ್ನ |

ಮುಂದೆ ನಿಲ್ಲುವರಿಲ್ಲೆಂಬುವ ನುಡಿಯಲ್ಲಿ  ||೩||


ಕುಜನ ದುಷ್ಕರ್ಮ ಕೂಟದಲೀ। ತನ್ನ|

ದ್ವಿಜನೆಂದು ಜನರು ಪೂಜಿಸುವ ಕಾಲದಲೀ। 

ರುಜೆಯಿಂದ ತಪಿಸುವೆಡೆಯಲೀ। ಕೂಡಿ |

ಸುಜನರೊಡನೆ ಮಾಡುವ ಖಿಲ ಯಜ್ಞದಲೀ ॥೪||


ಪರವಿಹವೆಂಬುದ ನೀಗಿ | ಪುಣ್ಯ |

ದುರಿತ ಶಬ್ದಂಗಳೆರಡು ಬೂದಿಯಾಗಿ। 

ಅರಿವಿನ ರೂಪೇ ನೀನಾಗಿ |ನಮ್ಮ |

ಗುರು ಶಂಕರಾರ್ಯನೊಳ್‌ ಬೆರದೇಕನಾಗೀ॥ 

ತನ್ನ ತಿಳಿದೊಡೆವ ಯೋಗಿ ॥೫||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು